ಕಾರ್ಕಳ : ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಲ್ಯಾಬ್ ಧ್ವಂಸ
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಬ್ರಮಣ್ಯ ಜೋಶಿ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜುಲೈ ೧೧ರಂದು ಸ.ಪ.ಪೂ. ಕಾಲೇಜಿನಲ್ಲಿ ಲ್ಯಾಬ್ ಪುಡಿಪುಡಿ ಎಂಬ
ವರದಿಯನ್ನು ಉಡುಪಿ X press ನಲ್ಲಿ ಪ್ರಕಟಿಸಲಾಗಿತ್ತು.
ವರದಿ ಪ್ರಕಟವಾಗುತ್ತಿದ್ದಂತೆಯೇ ಎಚ್ಚೆತ್ತ ಶಿಕ್ಷಣದ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಶುಕ್ರವಾರ ಪ್ರತ್ಯಕ್ಷವಾಗಿದ್ದಾರೆ.
ಘಟನೆಯ ಕುರಿತಂತೆ ಜಿಲ್ಲಾಧಿಕಾರಿಗಳು ಸ್ಪಷ್ಟತೆ ನೀಡುವಂತೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದ್ದು, ಆ ಮೇರೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಂದು ಶಿಕ್ಷಣಾ ಇಲಾಖೆಯ ಉಪನಿರ್ದೇಶಕ ಸುಬ್ರಮಣ್ಯ ಜೋಶಿ ಹೇಳಿದ್ದಾರೆ.
ವರದಿ ಬಿತ್ತರಿಸಿದ ಹಿನ್ನಲೆಯಲ್ಲಿ ಇಲ್ಲಿಗೆ ಆಗಮಿಸಿದ್ದು. ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದು. ಬಯೋಲಾಜಿ ಲ್ಯಾಬ್‌ಗೆ ಬೇಕಾದ ಮೂಲಭೂತ ಸೌಕರ್ಯವನ್ನು ಒದಗಿಸಲಾಗುವುದು ಎಂದು ಶಿಕ್ಷಣಾ ಇಲಾಖೆಯ ಉಪನಿರ್ದೇಶಕ ಸುಬ್ರಮಣ್ಯ ಜೋಶಿ ಹೇಳಿದ್ದಾರೆ.
ಮಕ್ಕಳ ವ್ಯಾಸಂಗಕ್ಕೆ ತೊಂದರೆಯಾಗದಂತೆ ಸಮಿತಿ ವತಿಯಿಂದ ಎಲ್ಲಾ ಸಹಕಾರವನ್ನು ನೀಡಲಿದ್ದೇವೆ ಲ್ಯಾಬ್‌ಗೆ ಬೇಕಾದ ಪರಿಕರಗಳ ಪಟ್ಟಿ ನೀಡಿ. ಕಮಿಟಿಯಿಂದ ಒದಗಿಸುವ ಪ್ರಯತ್ನ ಮಾಡಲಿದ್ದೇವೆ ಎಂದು ಶಾಲಾ ಅಭಿವೃದ್ಧಿ ಕಮಿಟಿ ಪದಾಧಿಕಾರಿ ನಿತ್ಯಾನಂದ ಪೈ ತಿಳಿಸಿದ್ದಾರೆ.