ಉಡುಪಿ: ಕಳೆದ ಒಂದು ತಿಂಗಳಿಂದ ಎಳ್ಳಾರೆ ಗ್ರಾಮದಲ್ಲಿ ಬ್ಯಾನರ್ ಗಳನ್ನು ಕಟ್ಟಿ ಗ್ರಾಮದಲ್ಲಿ ಗೊಂದಲ ಸೃಷ್ಟಿಸುವ ಕಾರ್ಯ ನಡೆಯುತ್ತಿದೆ. ಇದು ರಾಜಕೀಯ ಪ್ರೇರಿತವಾದುದು. ಎಳ್ಳಾರೆ-ಹೊಯ್ಗೆಜಡ್ಡುವಿನಲ್ಲಿ ಈಗಾಗಲೇ 20ಲಕ್ಷದ ಕಾಂಕ್ರೀಟಿಕರಣ ಕಾಮಗಾರಿ ನಡೆದಿದ್ದು, ಇನ್ನುಳಿದ ರಸ್ತೆಗೆ 60ಲಕ್ಷ ಅನುದಾನವು ಸರ್ಕಾರದ ಪ್ರಸ್ತಾವನೆಯಲ್ಲಿ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗುವುದು.
ಗ್ರಾಮ ಪಂಚಾಯತಿಯ ಅನುಮತಿಯಿಲ್ಲದೆ ರಾತ್ರಿವೇಳೆ ಬ್ಯಾನರ್ ಕಟ್ಟುವುದು, ಹಾಗೂ ಚುನಾವಣೆ ಹತ್ತಿರದಲ್ಲಿ ಸಂವಿಧಾನದಾನದ ವಿರುದ್ಧವಾಗಿ ಮತದಾನ ಬಹಿಷ್ಕಾರ ಮಾಡಬೇಕು ಎಂದು ಗ್ರಾಮಸ್ಥರನ್ನು ಪ್ರೇರೇಪಿಸುವುದನ್ನು ನಾವು ಖಂಡಿಸುತ್ತೇವೆ ಎಂದು ಗ್ರಾ.ಪಂ. ಕಡ್ತಲ ನಿಕಟಪೂರ್ವ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ
ಕಳೆದ 5ವರ್ಷದ ನಮ್ಮ ಅವಧಿಯಲ್ಲಿ ಎಳ್ಳಾರೆಯ ಪರಿಸರದಲ್ಲಿ ದಾಖಲೆಯ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಎಳ್ಳಾರೆಯಿಂದ ಶಿವಪುರಕ್ಕೆ ಸಂಪರ್ಕಿಸುವ ಕೊಂಬೆ ಸೇತುವೆಗೆ 75 ಲಕ್ಷ, ಎಳ್ಳಾರೆ ಗ್ರಾಮದ ಕಡಂಬಳ್ಳಿ ಅರ್ಬಿ ಸೇತುವೆಗೆ 1.50 ಕೋಟಿಯ ಕಾಮಗಾರಿಗಳು ಪೂರ್ಣಗೊಂಡು ಗ್ರಾಮಸ್ಥರಿಗೆ ಎಳ್ಳಾರೆಯಿಂದ ಶಿವಪುರ ಹೆಬ್ರಿಗೆ ಹೋಗಲು ಅನುಕೂಲವಾಗಿದೆ.
ಯುವುದೇ ಅಭಿವೃದ್ಧಿ ಕಾಣದೆ ಕುಗ್ರಾಮವಾಗಿದ್ದ ಎಳ್ಳಾರೆ ಗ್ರಾಮವು ನಮ್ಮ ಅವಧಿಯಲ್ಲಿ ಸುಗ್ರಾಮವಾಗಿ ಪರಿವರ್ತನೆಗೊಳ್ಳುತ್ತಿದೆ.
ಚುನಾವಣೆಯು ಹತ್ತಿರ ಬರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಬ್ಯಾನರ್ ಗಳನ್ನು ಕಟ್ಟಿ ನಮ್ಮ ಹೆಸರಿಗೆ ಮಸಿ ಬಳಿಯುವ ಹುನ್ನಾರವನ್ನು ನಾವು ಖಂಡಿಸುತ್ತೇವೆ. ಹಾಗೂ ಶೀಘ್ರದಲ್ಲಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.












