ಉಡುಪಿ: ಜಲಸಾರಿಗೆ ಇಲಾಖೆ ಉಡುಪಿ ವಿಭಾಗ ವತಿಯಿಂದ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿಯಾದ ಟಿ ಟಿ ಎಸ್ ಫಾಯದೆರವರ ಬೀಳ್ಕೊಡುಗೆ ಸಮಾರಂಭ ಮಣಿಪಾಲದ ಕಂಟ್ರಿ ಇನ್ನ್ ಹೋಟೆಲ್ ಸಭಾಂಗಣದಲ್ಲಿ ಇತ್ತೀಚಿಗೆ ನೆಡೆಯಿತು.
ಉಡುಪಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿ ಸುಮಾರು 35 ವರ್ಷ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಕಾರ್ಯ ನಿರ್ವಾಹಕ ಇಂಜಿನಿಯರ್ ಟಿ ಟಿ ಎಸ್ ಫಾಯದೆರವರನ್ನು ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಲಸಾರಿಗೆ ಮಂಡಳಿ ಕಾರವಾರದ ಮುಖ್ಯ ಇಂಜಿನಿಯರ್ ( ಪ್ರಭಾರ ) ಟಿ ಎಸ್ ರಾಥೋಡ್ ಗೌರವಿಸಿದರು ,
ವೇದಿಕೆಯಲ್ಲಿ ಉಡುಪಿ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಉದಯ ಕುಮಾರ್ ಶೆಟ್ಟಿ , ಮಂಗಳೂರು ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ರಾಘವೇಂದ್ರ ನಾಯ್ಕ , ಗುತ್ತಿಗೆದಾರ ಫಿಲಿಪ್ ಡಿ ಕೋಸ್ತಾ , ರಾಜೇಶ್ ಕಾರಂತ್ , ಶ್ರೀಮತಿ ನೀಲಂ ಫಾಯದೆ, ಬಾನು ಪ್ರಕಾಶ್ , ಹಾಗೂ ಇಲಾಖೆಯ ಅಧಿಕಾರಿಗಳು , ಸಿಬ್ಬಂದಿಗಳು , ಗುತ್ತಿಗೆದಾರ ಸಂಘದ ಪದಾಧಿಕಾರಿಗಳು , ಉಪಸ್ಥಿತರಿದ್ದರು.
ಪ್ರೇಮ್ ಜಾನ್ ಉಡುಪಿ ಕಾರ್ಯಕ್ರಮ ನಿರೂಪಿಸಿ ಸಂಗೀತ ರಸಮಂಜರಿ ನಡೆಸಿಕೊಟ್ಟರು , ಟಿ ಮುಳ್ಳಲ್ಲಿ ಸ್ವಾಗತಿಸಿದರು, ಥೋಸಿಯಾ ಜೋಸೆಫ್ ವಂದಿಸಿದರು.