ಜಾರ್ಕಳ ಬಳಿ ಕೆಎಸ್ ಆರ್ ಟಿಸಿ ಬಸ್- ಸ್ಕೂಟರ್ ಮಧ್ಯೆ ಭೀಕರ ಅಪಘಾತ; ದಂಪತಿ ಗಂಭೀರ

ಕಾರ್ಕಳ: ಕೆಎಸ್ ಆರ್ ಟಿಸಿ ಬಸ್ ಹಾಗೂ ಸ್ಕೂಟರ್ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ದಂಪತಿಗಳಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಜಾರ್ಕಳ ಬಳಿ ಇಂದು ಸಂಜೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ದಂಪತಿಗಳು ಜಾರ್ಕಳ ನಿವಾಸಿಗಳೆಂದು ತಿಳಿದು ಬಂದಿದೆ. ಇವರು ಜಾರ್ಕಳ ಕ್ರಾಸ್ ನಲ್ಲಿ ಬಸ್ ಅನ್ನು ಗಮನಿಸದೆ ಒಮ್ಮೇಲೆ ರಸ್ತೆ ಕ್ರಾಸ್ ಮಾಡಿದ್ದಾರೆ. ಇದರ ಪರಿಣಾಮ ಕಾರ್ಕಳದಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿಯಾದ ರಭಸಕ್ಕೆ […]

ಎಂಐಟಿ ಮಣಿಪಾಲ: ನಾಯಕತ್ವಕ್ಕಾಗಿ ಮೈಲ್‌ಸ್ಟೋನ್ ಮೆರಿಟ್ ರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿ

ಮಣಿಪಾಲ: ನಾಯಕತ್ವಕ್ಕಾಗಿ ನೀಡಲಾಗುವ ಮೈಲ್‌ಸ್ಟೋನ್ ಮೆರಿಟ್ ರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿಯು ಎಂಐಟಿ ಸಂಸ್ಥೆಗೆ ಲಭಿಸಿದೆ. ನಾಯಕತ್ವ ವಿಭಾಗದಲ್ಲಿ ಪ್ರತಿಷ್ಠಿತ ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿ (ಐಎಂಸಿ-ಆರ್ ಬಿ ಎನ್ ಕ್ಯೂ ಎ)ಯನ್ನು ತನ್ನದಾಗಿಸಿಕೊಂಡಿದೆ. ಸಂಸ್ಥೆಗೆ ಈ ಪ್ರಶಸ್ತಿ ಲಭಿಸಿರುವುದು ಮಾಹೆಯ ಯ ಉನ್ನತ ನಾಯಕತ್ವದ ಪ್ರಮುಖ ಪಾತ್ರಕ್ಕೆ ನೀಡಿದ ಮನ್ನಣೆಯಾಗಿದ್ದು, ಎಂಐಟಿ-ಮಣಿಪಾಲ್‌ ನ ಕಾರ್ಯನಿರ್ವಹಣೆಯ ಶ್ರೇಷ್ಠತೆಯ ಪ್ರಯಾಣದಲ್ಲಿ ಹೆಚ್ಚಿನ ಎತ್ತರವನ್ನು ಸಾಧಿಸಲು ವೇಗವರ್ಧಕವಾಗಿದೆ. ಸಿಡಿಆರ್ (ಡಾ.) ಅನಿಲ್ ರಾಣಾ, ನಿರ್ದೇಶಕ, ಎಂಐಟಿ-ಮಣಿಪಾಲ, ಇವರಿಗೆ ಕಾರ್ಯಕ್ರಮದ […]

ಮಸೀದಿಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ: ಮುತಾಲಿಕ್

ಬೆಂಗಳೂರು: ಮುಂಜಾನೆ 5 ಗಂಟೆಯಿಂದಲೇ ಮಸೀದಿಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳು ಗಲಾಟೆ ಸೃಷ್ಟಿಸುತ್ತಿದ್ದು, ಅವುಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ, ಹಾಗಾಗಿ ಅವರನ್ನು ಓಲೈಸುವ ಅಗತ್ಯವಿಲ್ಲ ಎಂದಿದ್ದಾರೆ. “ನಾವು ಮಸೀದಿಗಳಲ್ಲಿ ಪ್ರಾರ್ಥನೆಗಳನ್ನು ವಿರೋಧಿಸುವುದಿಲ್ಲ, ಆದರೆ ಅಜಾನ್ ರೂಪದಲ್ಲಿ ಧ್ವನಿವರ್ಧಕಗಳ ಶಬ್ದವನ್ನು ವಿರೋಧಿಸುತ್ತೇವೆ. ಇದು ಸಂಕಟವಾಗಿ ಪರಿಣಮಿಸಿ ಜನರ ಮೇಲೆ ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿಗಳು, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರು ಮತ್ತು ಆಸ್ಪತ್ರೆಗಳಲ್ಲಿನ […]

ಉದ್ಯಮಿಯಾಗು, ಉದ್ಯೋಗ ನೀಡು ಕಾರ್ಯಾಗಾರ

ಉಡುಪಿ: ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳ ಉದ್ದಿಮೆಗಳ ಅಭಿವೃದ್ಧಿಗಾಗಿ ಉದ್ಯಮಿಯಾಗು ಹಾಗೂ ಉದ್ಯೋಗ ನೀಡು ಕಾರ್ಯಾಗಾರವು ಮೇ 12 ರಂದು ಮಂಗಳೂರು, ಕೊಡಿಯಾಲ್‌ಬೈಲ್‌ನ ಡಾ.ಟಿ.ಎಮ್.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9.00 ರಿಂದ ಮಧ್ಯಾಹ್ನ 3.30 ರವರೆಗೆ ಮಣಿಪಾಲದ ರಜತಾದ್ರಿ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ವರ್ಚುವಲ್ ವೇದಿಕೆ ಮೂಲಕ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಾಗಾರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಯೋಜನೆ, ಮೂಲಸೌಕರ್ಯ, ಹಣಕಾಸು ಸೌಲಭ್ಯ […]

ಕಾರ್ಮಿಕ ಕಲ್ಯಾಣ ಸುಂಕ ಪಾವತಿ: ಖಾತೆ ಬದಲಾವಣೆ

ಉಡುಪಿ: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸರ್ಕಾರದಿಂದ ಕೈಗೊಳ್ಳಲಾಗುತ್ತಿದ್ದ ಕಾಮಗಾರಿಗಳಿಗೆ ಪಾವತಿಸಲಾಗುತ್ತಿದ್ದ ಕಾರ್ಮಿಕ ಕಲ್ಯಾಣ ಸುಂಕದ ಖಾತೆಯನ್ನು ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ ಖಜಾನೆ-2 ಮುಖಾಂತರ ಕಾರ್ಮಿಕ ಕಲ್ಯಾಣ ಸುಂಕವನ್ನು ಪಾವತಿ ಮಾಡುವ ಸುಂಕದಾರರು ಕಾರ್ಯದರ್ಶಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಲೆಕ್ಕ ಶೀರ್ಷಿಕೆ 8449-00- 120-0-18-660 ರಡಿಯಲ್ಲಿನ ಠೇವಣಿ ಖಾತೆ ಸಂಖ್ಯೆ: 26572ಇ181 ಮತ್ತು ಡಿ.ಡಿ.ಓ ಕೋಡ್ 997480 […]