ಉಡುಪಿ: ಉಡುಪಿಯ ಉಪ್ಪೂರು ಕೊಳಲಗಿರಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ, ಟಯೊಟಾ ಕಂಪನಿಯು ಜಿಟಿಟಿಸಿಯಲ್ಲಿನ ವಿದ್ಯಾರ್ಥಿಗಳಿಗೆ ಆಟೋಮೊಬೈಲ್ ಕ್ಷೇತ್ರಕ್ಕೆ ಸಂಬಂಧಿಸಿದ ಅಸೆಂಬ್ಲಿ ಫಿಟ್ಟರ್ ಮತ್ತು ವೆಲ್ಡರ್ ಟ್ರೇಡ್ಗಳಲ್ಲಿ ವೃತ್ತಿಪರ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
3 ವರ್ಷ ಅವಧಿಯ ತರಬೇತಿ ಇದಾಗಿದ್ದು, 1 ವರ್ಷ ಜಿಟಿಟಿಸಿ ಉಡುಪಿಯಲ್ಲಿ ಮತ್ತು ಎರಡು ವರ್ಷ ಬೆಂಗಳೂರಿನ ಪ್ರತಿಷ್ಟಿತ ಕೈಗಾರಿಕಾ ಸಂಸ್ಥೆಯಲ್ಲಿ ತರಬೇತಿ ಇರುತ್ತದೆ. ಈ ಎರಡು ವರ್ಷಗಳ ಅವಧಿಯಲ್ಲಿ ಮಾಸಿಕ ಸ್ಟ್ರೈಫಂಡ್, ಸಾರಿಗೆ ಮತ್ತು ಕ್ಯಾಂಟೀನ್ ಸೌಲಭ್ಯ ನೀಡಲಾಗುತ್ತದೆ.
ಅಭ್ಯರ್ಥಿಗಳು ಶೈಕ್ಷಣಿಕ ಹಾಗೂ ವಿಳಾಸ ದೃಢೀಕರಣ ದಾಖಲೆಗಳೊಂದಿಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಕೊಳಲಗಿರಿ, ಉಪ್ಪೂರು, ಉಡುಪಿ ಇಲ್ಲಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2950 101, ಮೊಬೈಲ್ ಸಂಖ್ಯೆ 98805 10585 ಸಂಪರ್ಕಿಸುವಂತೆ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.