ಉಡುಪಿ: ಇಂದು ಎಸ್ಸೆಸ್ಸೆಲ್ಸಿ ವಿಜ್ಞಾನ ವಿಷಯದ ಕುರಿತು ಫೋನ್ ಇನ್ ಕಾರ್ಯಕ್ರಮ

ಉಡುಪಿ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬಲವರ್ಧನೆಗಾಗಿ ಎಸ್ಸೆಸ್ಸೆಲ್ಸಿ ವಿಜ್ಞಾನ ವಿಷಯದ ಕುರಿತ ಫೋನ್ ಇನ್ ಕಾರ್ಯಕ್ರಮ ಇಂದು (ಮಾ. 5) ಸಂಜೆ 5 ರಿಂದ ರಾತ್ರಿ 7 ರ ವರೆಗೆ ಉಡುಪಿಯ ಸರಕಾರಿ ಪ್ರೌಢ ಶಾಲೆ (ಬೋರ್ಡ್) ಯಲ್ಲಿ ಹಮ್ಮಿಕೊಳ್ಳಲಾಗಿದೆ.

ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಕಲಿಕಾ ಸಮಸ್ಯೆಗಳ ಬಗ್ಗೆ ದೀಪಾ ಉಡುಪ ಮೊ.ನಂ: 86182 40682, ರಜನಿ ಉಡುಪ ಮೊ.ನಂ: 98807 84064, ವಿನೋದ ಮೊ.ನಂ: 97435 77651, ನವ್ಯಾ ಮೊ.ನಂ: 90084 17909, ನಾಗೇಂದ್ರ ಪೈ ಮೊ.ನಂ: 98861 18891, ಮಿಲ್ಟನ್ ಕ್ರಾಸ್ತಾ ಮೊ.ನಂ: 94811 44081.

ನಯನಾ ಮೊ.ನಂ: 94818 42173 ಹಾಗೂ ಪರೀಕ್ಷಾ ಸಿದ್ಧತೆ, ಮತ್ತಿತರ ಪ್ರಶ್ನೆಗಳಿಗೆ ಡಿಡಿಪಿಐ ಎನ್. ಎಚ್. ನಾಗೂರ ಮೊ.ನಂ: 94489 99353 ಮತ್ತು ಉಡುಪಿ ಬಿಇಓ ಮೊ.ನಂ: 94806 95376 ಇವರಿಗೆ ಕರೆ ಮಾಡಿ ಪ್ರಶ್ನೆ ಕೇಳಿ ಪರಿಹಾರ ಪಡೆಯಬಹುದು.

ಪೋಷಕರು, ಸಾರ್ವಜನಿಕರೂ ಸಹ ಕರೆ ಮಾಡಿ ಪರೀಕ್ಷಾ ಸಿದ್ಧತೆ ಮತ್ತಿತರ ಶೈಕ್ಷಣಿಕ ಸಮಸ್ಯೆಗಳಿಗೆ ಡಿಡಿಪಿಐ ನಂಬರ್‌ಗೆ ಕರೆ ಮಾಡಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.