ಉಡುಪಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಹಾಕಿಸುವ ‘ಕೋವಿಡ್-19 ಲಸಿಕಾ ಮಹಾಮೇಳ’ ನಾಳೆ (ಆ.27) ಜಿಲ್ಲೆಯಲ್ಲಿ ನಡೆಯಲಿದೆ.
ಆರೋಗ್ಯ ಕಾರ್ಯಕರ್ತರು/ಮುಂಚೂಣಿ ಕಾರ್ಯಕರ್ತರು/ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳಿಗೆ/60 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಪ್ರಥಮ ಮತ್ತು 2ನೇ ಡೋಸ್ ಕೋವಿಡ್-19 ಲಸಿಕೆಯನ್ನು ಎಲ್ಲಾ ಸರಕಾರಿ ಆಸ್ಪತ್ರೆಗಳ ಲಸಿಕಾ ಕೇಂದ್ರಗಳಲ್ಲಿ ಪ್ರಥಮ ಆದ್ಯತೆಯ ಮೇರೆಗೆ ನೀಡಲಾಗುವುದು. ಹಾಗೆ 18 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಮತ್ತು 2ನೇ ಡೋಸ್ ಲಸಿಕೆ ನೀಡಲಾಗುವುದು.
ಉಡುಪಿ ನಗರ ಪ್ರದೇಶದ ಈ ಕೆಳಗಿನ ಆಸ್ಪತ್ರೆಗಳಲ್ಲಿ ಕೋವಿಡ್-19 ಪ್ರಥಮ ಮತ್ತು 2ನೇ ಡೋಸ್ ಲಸಿಕೆ ಲಭ್ಯ.
1.ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ (ಸೇಂಟ್ ಸಿಸಿಲಿ ಶಾಲೆ, ಉಡುಪಿ)
ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್-(300 ಡೋಸ್ ಲಭ್ಯ)
2. ಶ್ರೀ ಶಿರಡಿ ಸಾಯಿಬಾಬ ಮಂದಿರ ತೋಟದಮನೆ, ಸಾಯಿಬಾಬ ನಗರ,ಕೊಡವೂರು ಪೋಸ್ಟ್, ಉಡುಪಿ
ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್-(200 ಡೋಸ್ ಲಭ್ಯ)
3.ಭಗವತಿ ದುರ್ಗಾಪರಮೇಶ್ವರಿ ಸಭಾಭವನ ಪುತ್ತೂರು ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್-(200 ಡೋಸ್ ಲಭ್ಯ)
4. ಬಾಳಿಗಾ ಫಿಶ್ ನೆಟ್ ನಿಟ್ಟೂರು,ಉಡುಪಿ
ಕೋವಿಶೀಲ್ಡ್ 2ನೇ ಡೋಸ್-(1000 ಡೋಸ್ ಲಭ್ಯ)
5. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ (ಮಾಧವ ಕೃಪಾ ಶಾಲೆ, ಮಣಿಪಾಲ)
ಕೋವಿಶೀಲ್ಡ್ ಪ್ರಥಮ ಡೋಸ್-(400 ಡೋಸ್ ಲಭ್ಯ) ಕೋವಿಶೀಲ್ಡ್ 2ನೇ ಡೋಸ್-(400 ಡೋಸ್ ಲಭ್ಯ)
6. ಮಂಜುನಾಥ ಶಿವತ್ತಾಯ ರಂಗಮಂಟಪ, ಯುವಕ ಮಂಡಲ (ರಿ) ಪೆರಂಪಳ್ಳಿ (ಬೊಬ್ಬರ್ಯ ಕಟ್ಟೆ ಹತ್ತಿರ) ಕೋವಿಶೀಲ್ಡ್ ಪ್ರಥಮ ಡೋಸ್-(100 ಡೋಸ್ ಲಭ್ಯ)
ಕೋವಿಶೀಲ್ಡ್ 2ನೇ ಡೋಸ್-(100 ಡೋಸ್ ಲಭ್ಯ)
7. ಸಾರ್ವಜನಿಕ ಗಣೇಶೋತ್ಸವ ಸಮಿತಿ(ರಿ)ಮನ್ನೊಳಿ ಗುಜ್ಜಿ, ಸಗ್ರಿ ವಾರ್ಡ,ಉಡುಪಿ ಕೋವಿಶೀಲ್ಡ್ ಪ್ರಥಮ ಡೋಸ್-(100 ಡೋಸ್ ಲಭ್ಯ)
ಕೋವಿಶೀಲ್ಡ್ 2ನೇ ಡೋಸ್-(100 ಡೋಸ್ ಲಭ್ಯ)
8. ಎಫ್.ಪಿ.ಎ.ಐ ಕುಕ್ಕಿಕಟ್ಟೆಯಲ್ಲಿ (ಇಂದಿರಾನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಇಂದಿರಾನಗರ)
ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್-(250 ಡೋಸ್ ಲಭ್ಯ)
9. ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆ, ಉಡುಪಿ
ಸಮಯ:ಬೆಳಿಗ್ಗೆ 9.30 ರಿಂದ ಅಪರಾಹ್ನ 1.00 ರವರೆಗೆ.
ದಿನಾಂಕ 30/09/2021 ರ ಒಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ (100 ಡೋಸ್ ಲಭ್ಯ.)
1) ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಕಾರ್ಯಕರ್ತರು/ಮುಂಚೂಣಿ ಕಾರ್ಯಕರ್ತರು/ ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳಿಗೆ/ 60 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಪ್ರಥಮ ಮತ್ತು 2ನೇ ಡೋಸ್ ಕೋವಿಡ್-19 ಲಸಿಕೆಯನ್ನು ಎಲ್ಲಾ ಸರಕಾರಿ ಆಸ್ಪತ್ರೆಗಳ ಲಸಿಕಾ ಕೇಂದ್ರಗಳಲ್ಲಿ ಪ್ರಥಮ ಆದ್ಯತೆಯ ಮೇರೆಗೆ ನೀಡಲಾಗುವುದು. ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಮತ್ತು 2ನೇ ಡೋಸ್ ಲಸಿಕೆ ನೀಡಲಾಗುವುದು. ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯುವುದು.
2) ಜಿಲ್ಲೆಯಲ್ಲಿ 40,000 ಡೋಸ್ ಲಸಿಕೆ ಲಭ್ಯವಿದ್ದು ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.