ಮಣಿಪಾಲ: ತುರ್ತು ಸೇವಾ ವಾಹನಗಳಿಗೆ ಎಸ್ಪಿ ವಿಷ್ಣುವರ್ಧನ್ ಚಾಲನೆ

ಉಡುಪಿ: ಜಿಲ್ಲೆಯಲ್ಲಿ ತುರ್ತು ಸೇವೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ 12 ತುರ್ತು ಪ್ರತಿಕ್ರಿಯಾ ವಾಹನಗಳಿಗೆ (ಇಆರ್‌ಎಸ್‌ಎಸ್) ಮಣಿಪಾಲದ ಸಿಂಡಿಕೇಟ್‌ ಸರ್ಕಲ್‌ನಲ್ಲಿ ಶನಿವಾರ ಚಾಲನೆ ನೀಡಲಾಯಿತು. ಹಸಿರು ನಿಶಾನೆ ತೋರಿಸುವ ಮೂಲಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌ ವಾಹನಗಳಿಗೆ ಚಾಲನೆ ನೀಡಿದರು. ತುರ್ತು ಸೇವೆಗಳಿಗೆ 112ಕ್ಕೆ ಕರೆ ಮಾಡಿ: ಸಾರ್ವಜನಿಕರು ಇನ್ಮುಂದೆ ಟೋಲ್ ಫ್ರೀ ನಂಬರ್ 100 ರ ಬದಲಾಗಿ 112ಕ್ಕೆ ಕರೆ ಮಾಡಿದಲ್ಲಿ ಅವಶ್ಯಕತೆ ಇರುವ ಸ್ಥಳಕ್ಕೆ ಅತೀ ಸಮೀಪ ಇರುವ ಇ.ಆರ್.ಎಸ್.ಎಸ್. ವಾಹನವು ಸದ್ರಿ ಸ್ಥಳಕ್ಕೆ […]

ಉಡುಪಿ: ಹೊಸ ಸ್ವರೂಪದೊಂದಿಗೆ ತನಿಷ್ಕ್ ಚಿನ್ನಾಭರಣ ಮಳಿಗೆ ಪುನಾರಂಭ

ಉಡುಪಿ: ಇಲ್ಲಿನ ಗೀತಾಂಜಲಿ ಥಿಯೇಟರ್ ರಸ್ತೆಯ ರಾಮಕೃಷ್ಣ ಹೋಟೆಲ್ ಮುಂಭಾಗದ ಕಟ್ಟಡದಲ್ಲಿರುವ ತನಿಷ್ಕ್ ಚಿನ್ನಾಭರಣ ಮಳಿಗೆ ವಿನೂತನ ಸ್ವರೂಪದೊಂದಿಗೆ ಶನಿವಾರ ಪುನಾರಂಭಗೊಂಡಿತು. ಟಾಟಾ ಸನ್ಸ್ ಪ್ರೈವೇಟ್ ಲಿಮೆಟೆಡ್‍ನ ನಿರ್ದೇಶಕ ಭಾಸ್ಕರ್ ಭಟ್, ಟೈಟನ್ ಕಂಪನಿ ಲಿಮಿಟೆಡ್‍ನ ದಕ್ಷಿಣದ ಪ್ರಾದೇಶಿಕ ವಹಿವಾಟು ಮುಖ್ಯಸ್ಥ ಶರದ್ ಮಳಿಗೆಯನ್ನು ಉದ್ಘಾಟಿಸಿದರು. ಆಶೀರ್ವಚನ ನೀಡಿದ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಗ್ರಾಹಕರ ವಿಶ್ವಾಸ, ನಂಬಿಕೆಗೆ ಟಾಟಾ ಸಂಸ್ಥೆ ಪಾತ್ರವಾಗಿದ್ದು, ಉತ್ತಮ ಗುಣಮಟ್ಟ, ಪ್ರಾಮಾಣಿಕತೆಗೆ ಈ ಸಂಸ್ಥೆ ಹೆಸರುವಾಸಿಯಾಗಿದೆ. ಈ ಸಂಸ್ಥೆ ಇನ್ನಷ್ಟು […]

ಜೊತೆಗಿದ್ದ ಸ್ನೇಹಿತರು ನನ್ನ ಕೈಬಿಟ್ಟು ಒಬ್ಬಂಟಿ ಮಾಡಿದರು: ಎಚ್‌. ವಿಶ್ವನಾಥ್‌ ಬೇಸರದ ನುಡಿ

ಚಿತ್ರದುರ್ಗ: ಜೊತೆಗಿದ್ದ ಸ್ನೇಹಿತರೆಲ್ಲರೂ ನನ್ನನ್ನು ಕೈಬಿಟ್ಟರು. ಅವರು ಸಚಿವರಾದರು. ನಾನು ಗಟ್ಟಿಧ್ವನಿಯಲ್ಲಿ ಮಾತನಾಡಿ ಒಬ್ಬಂಟಿಯಾದೆ. ರಾಜ್ಯದ ಜನರು ನನ್ನ ಜೊತೆಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್‌.ವಿಶ್ವನಾಥ್‌ ಬೇಸರ ವ್ಯಕ್ತಪಡಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬೈಗೆ ತೆರಳಿದ 17 ಜನ ಶಾಸಕರ ತಂಡವನ್ನು ನಾನು ಮುನ್ನೆಡಿಸಿದ್ದೆ. ಮಂತ್ರಿಯಾಗಬೇಕೆಂಬ ಉದ್ದೇಶದಿಂದ ಬಿಜೆಪಿಗೆ ಬಂದಿಲ್ಲ. ಸಚಿವ ಸ್ಥಾನವನ್ನು ಮತ್ತೆ ಕೇಳುವುದಿಲ್ಲ. ರಾಜ್ಯದಲ್ಲಿ ಗಟ್ಟಿಧ್ವನಿ ಕೇಳಿಸುತ್ತದೆ ಹೊರತು, ಹೇಡಿ ಧ್ವನಿಯಲ್ಲ’ ಎಂದರು.

ಕಾರ್ಕಳ: ಅತ್ತೂರು ವಾರ್ಷಿಕ ಮಹೋತ್ಸವ

ಕಾರ್ಕಳ: ಅತ್ತೂರು ಕಾರ್ಕಳ ಸಂತ ಲಾರೆನ್ಸರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಐದನೇ ದಿನವಾದ ಶುಕ್ರವಾರ ಐದು ಬಲಿಪೂಜೆ ನಡೆಯಿತು. ಈ ಸಂದರ್ಭದಲ್ಲಿ ಸಂತ ಲಾರೆನ್ಸರ ನವೇನಾ ಪ್ರಾರ್ಥನೆ ಹಾಗೂ ರೋಗಿಗಳಿಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಮೂಡುಬೆಳ್ಳೆಯ ಫಾದರ್ ಚಾರ್ಲ್ಸ್ ಪುರ್ಟಾಡೊ, ಗಂಟಾಲ್‍ಕಟ್ಟೆಯ ಫಾದರ್ ರೊನಾಲ್ಡ್ ಪ್ರಕಾಶ್ ಡಿ’ಸೋಜಾ, ಆಳದಂಗಡಿಯ ಫಾದರ್ ನವೀನ್ ಪಿಂಟೊ, ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾದರ್ ಆಸ್ಸಿಸಿ ಆಲ್ಮೇಡ ಹಾಗೂ ಪಲಿಮಾರಿನ ಫಾದರ್ ರೊಕ್ ಡಿಸೋಜಾ ಅವರು ಬಲಿ ಪೂಜೆ ನೆರವೇರಿಸಿದರು. ನೂರಾರು ಭಕ್ತರು […]

ಮೋದಿ ನಂತರದ ನಾಯಕ ಯಾರು?. ಸಮೀಕ್ಷೆಯ ಫಲಿತಾಂಶ ಹೀಗಿದೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಏಳು ವರ್ಷಗಳಿಂದ ಉತ್ತುಂಗದಲ್ಲಿದ್ದು, 2024 ರಲ್ಲಿ ಮೋದಿ ಆಡಳಿತಾವಧಿ ಮುಕ್ತಾಯಗೊಳ್ಳಲಿದೆ. ಆ ಬಳಿಕ ಅವರೇ ಮತ್ತೊಂದು ಅವಧಿಗೂ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೋ ಅಥವಾ ಬೇರೆ ನಾಯಕರು ಆಯ್ಕೆಯಾಗುತ್ತಾರೋ ಎಂಬ ಬಗ್ಗೆ ಚರ್ಚೆಗಳು ರಾಜಕೀಯ ಪಡಸಾಲೆ ಕೇಳಿಬರುತ್ತಿವೆ. ಮೋದಿ ಹೊರತಾಗಿ ಜನಪ್ರಿಯ ನಾಯಕ ಯಾರಿದ್ದಾರೆ ಎಂಬ ಬಗ್ಗೆ  ಇಂಡಿಯಾ ಟುಡೆ ವಾಹಿನಿ ಸಮೀಕ್ಷೆ ನಡೆಸಿದ್ದು, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡುವಿನ […]