udupixpress
Home Trending ವಲಸೆ ಕಾರ್ಮಿಕರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಣೆ: ಜಿಲ್ಲಾಧಿಕಾರಿ ಜಿ.ಜಗದೀಶ್

ವಲಸೆ ಕಾರ್ಮಿಕರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಣೆ: ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ ಮೇ 22: ಜಿಲ್ಲೆಯಲ್ಲಿ, ಹೋಟೆಲ್, ಕಾರ್ಖಾನೆ, ಕಟ್ಟಡ ಕಾರ್ಮಿಕರು ಹಾಗೂ ಇನ್ನಿತರ ಯಾವುದೇ ಸಂಸ್ಥೆ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ  ವಲಸೆ ಕಾರ್ಮಿಕರಿಗೆ, ಕೇಂದ್ರ ಸರ್ಕಾರದ ಆತ್ಮ ಭಾರತ್ ನಿರ್ಭರ್ ಯೋಜನೆ ಅಡಿಯಲ್ಲಿ, ಮೇ ಮತ್ತು ಜೂನ್ ಮಾಹೆಯಲ್ಲಿ ಉಚಿತವಾಗಿ  ಆಹಾರಧಾನ್ಯವನ್ನು ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಆದೇಶದಂತೆ, ಈ ಯೋಜನೆಯಡಿ ಬರುವ ವಲಸೆ ಕಾರ್ಮಿಕರು ರಾಜ್ಯದಲ್ಲಿ ಮತ್ತು ಬೇರಾವುದೇ ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಚೀಟಿ ಹೊಂದಿರಬಾರದು. ಆಹಾರಧಾನ್ಯ ವಿತರಿಸುವಾಗ ಇದನ್ನು ಇಲಾಖಾ ತಂತ್ರಾಂಶದ ಪರಿಶೀಲಿಸಿ ಖಾತ್ರಿ ಪಡಿಸಿಕೊಂಡು ಸಂಬಂಧಿಸಿದ ಫಲಾನುಭವಿಯ ಆಧಾರ್ ಸಂಖ್ಯೆಯ ಮುಖಾಂತರ ಅವರ ಮೊಬೈಲ್ ಸಂಖ್ಯೆ ನಮೂದಿಸಿ, ಓಟಿಪಿ ಬಂದ ನಂತರ, ಓಟಿಪಿ ಯನ್ನು ದಾಖಲಿಸಿ ಉಚಿತವಾಗಿ ಪಡಿತರ ವಿತರಿಸಲಾಗುವುದು.

ಸಂಬoಧಿಸಿದ ಫಲಾನುಭವಿ ಆಹಾರಧಾನ್ಯ ಪಡೆಯಲು ನ್ಯಾಯಬೆಲೆ ಅಂಗಡಿಗೆ ಬರುವಾಗ ಕಡ್ಡಾಯವಾಗಿ ಆಧಾರ್ ಕಾರ್ಡುನ್ನು ತರಲೆಬೇಕು. ಮೇ-2020 ರ ಮಾಹೆಯ ಹಂಚಿಕೆಯನ್ವಯ,  ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿಯನ್ನು ಮೇ 26 ರಿಂದ  31 ರ ವರೆಗೆ,  ಹಾಗೂ ಜೂನ್ ತಿಂಗಳಲ್ಲಿ ಜೂನ್ 1 ರಿಂದ 10 ರ ವರೆಗೆ ವಿತರಿಸಲಾಗುವುದು. ಒಂದು ವೇಳೆ ಮೇ ತಿಂಗಳಿನಲ್ಲಿ, ಆಹಾರ ಧಾನ್ಯವನ್ನು ಪಡೆಯದ ವಲಸೆ ಫಲಾನುಭವಿ, ಜೂನ್ ತಿಂಗಳಲ್ಲಿ ಒಟ್ಟಿಗೆ 10 ಕೆಜಿ ಅಕ್ಕಿ, ಮತ್ತು ಕಡಲೆ ಕಾಳು ಉಚಿತವಾಗಿ ಪಡೆಯಲು ಅರ್ಹರಿರುತ್ತಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

error: Content is protected !!