ಮೇ. 24: ಉಡುಪಿ ಜಾಮಿಯಾ ಮಸೀದಿಯಿಂದ ಈದ್ ಸಂದೇಶ ನೇರಪ್ರಸಾರ

ಉಡುಪಿ, ಮೇ 22: ಕೋವಿಡ್ 19 ಲಾಕ್ಡೌನ್ ಹಿನ್ನೆಲೆಯಲ್ಲಿ ಮೇ. 24ರ ಈದುಲ್ ಫಿತರ್ ದಿನದಂದು ಉಡುಪಿ ಜಾಮಿಯಾ ಮಸೀದಿಯ ವತಿಯಿಂದ ಈದ್ ಸಂದೇಶದ ನೇರ ಪ್ರಸಾರವು ಸ್ಥಳಿಯ ಸಿಫೋರ್ ಯು ಚಾನೆಲ್ ಮತ್ತು ಯೂಟ್ಯೂಬ್ ಗಳಲ್ಲಿ ನಡೆಯಲಿದೆ. ಬೆಳಗ್ಗೆ 8:15 ಕ್ಕೆ ಮಸೀದಿಯ ಇಮಾಮ್ ಮತ್ತು ಖತೀಬ್ಮೌಲಾನಾ ರಶೀದ್ ಅಹ್ಮದ್ ಉಮ್ರಿ ನದ್ವಿ ಈದ್ ನಮಾಝನ್ನು ಮನೆಯಲ್ಲಿ ಹೇಗೆ ನಿರ್ವಹಿಸಬಹುದೆಂಬ ಮಾಹಿತಿ ನೀಡಲಿರುವರು.‌ ನಮಾಝಿನ ನಂತರ ಈದ್ ಸಂದೇಶ (ಖುತ್ಬಾ) ನೀಡಲಿರುವರು.‌ ನಂತರ ದೊಡ್ಡಣಗುಡ್ಡೆಯ ರಹ್ಮಾನಿಯಾ […]

ಉಡುಪಿಯಲ್ಲಿ ಮತ್ತೆ ಮೂರು ಕೊರೊನಾ ಪಾಸಿಟಿವ್: ಜನರಲ್ಲಿ ಹೆಚ್ಚಿದ ಆತಂಕ

ಉಡುಪಿ: ಜಿಲ್ಲೆಯಲ್ಲಿ ಇಂದು ಮತ್ತೆ ಮೂರು ಹೊಸ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ. ಇಂದು ಮಧ್ಯಾಹ್ನ ಬಿಡುಗಡೆಗೊಂಡ ರಾಜ್ಯ ಕೋವಿಡ್ ಬುಲೆಟಿನ್ ನಲ್ಲಿ ಯಾವುದೇ ಸೋಂಕು ಕಾಣಿಸಿಕೊಂಡಿಲ್ಲ. ಆದರೆ ಸಂಜೆಯ ವರದಿ ಜಿಲ್ಲೆಯ ಜನರಿಗೆ ಶಾಕ್ ನೀಡಿದೆ. ಮುಂಬೈನಿಂದ ಜಿಲ್ಲೆಗೆ ಆಗಮಿಸಿದ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. 31 ಹಾಗೂ 55 ವರ್ಷದ ಇಬ್ಬರು ಪುರುಷರು ಮತ್ತು 48 ವರ್ಷದ ಒಬ್ಬ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಮುಂಗಾರು ಮಳೆಯ ಪ್ರಾಕೃತಿಕ ವಿಕೋಪ ತಡೆಗೆ ಮುಂಜಾಗ್ರತೆ ವಹಿಸಿ: ಅಪರ ಜಿಲ್ಲಾಧಿಕಾರಿ

ಉಡುಪಿ ಮೇ 23: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಮಳೆಯ ಸಮಯದಲ್ಲಿ ಪ್ರಾಕೃತಿಕ ವಿಕೋಪಗಳಿಂದ ಮಾನವ ಜೀವ ಹಾನಿ, ಜಾನುವಾರು ಹಾಗೂ ಆಸ್ತಿ ಹಾನಿಗಳನ್ನು ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ವಿಕೋಪ ಸಂಭವಿಸಿದ ಸಮಯದಲ್ಲಿ ಸಾರ್ವಜನಿಕರ ರಕ್ಷಣೆಗೆ ತುರ್ತಾಗಿ ಸ್ಪಂದಿಸುವಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಸೂಚಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಮುಂಗಾರು ಮಳೆ ವಿಪತ್ತು ನಿರ್ವಹಣೆ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸುವ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತ […]

ಹಸಿರು ವಲಯ ಕೆಂಪು ವಲಯವಾದರೂ ಹೊರ ರಾಜ್ಯದಿಂದ ಜನ ಬರಲು ವ್ಯವಸ್ಥೆ ಮಾಡುತ್ತೇವೆ: ಕರಂದ್ಲಾಜೆ

ಕುಂದಾಪುರ : ಹೊರರಾಜ್ಯಗಳಿಂದ ಜನರು ನಮ್ಮ ಜಿಲ್ಲೆಗೆ ಬಂದರೆ ಹಸಿರು ವಲಯವಾಗಿದ್ದ ಜಿಲ್ಲೆ ಕೆಂಪು ವಲಯವಾಗುತ್ತದೆ ಎನ್ನುವ ಅರಿವಿದ್ದರೂ ಕೂಡ ನಮ್ಮವರಿಗಾಗಿ ಹಾಗೂ ಮಾನವೀಯತೆಯ ನೆಲೆಯಿಂದ ಸರ್ಕಾರಕ್ಕೆ ಮನವಿ ಮಾಡಿ ನಮ್ಮವರನ್ನು ಉಡುಪಿ ಜಿಲ್ಲೆಗೆ ಬರಲು ವ್ಯವಸ್ಥೆ ಮಾಡಿಕೊಟ್ಟಿದ್ದೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಶುಕ್ರವಾರ ಇಲ್ಲಿನ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಕೋವಿಡ್-19 ತಡೆ ಕುರಿತಾದ ಸಭೆಯಲ್ಲಿ ಅವರು ಮಾತನಾಡಿದರು. ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಕ್ವಾರಂಟೈನ್ ಕೇಂದ್ರಗಳಲ್ಲಿ ಈಗಾಗಲೇ ಸಾಕಷ್ಟು ಮಂದಿ ಇದ್ದಾರೆ. […]

ಸುಮ್ಮನೆ ಕರೆ ಮಾಡಿ ಅಪ್ರಚಾರ ಮಾಡುವವರನ್ನು ಜೈಲಿಗಟ್ಟುತ್ತೇನೆ: ಜಿಲ್ಲಾಧಿಕಾರಿ ಜಿ. ಜಗದೀಶ್

ಕುಂದಾಪುರ: ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಇದರ ಮದ್ಯೆ ಕೆಲ ಕಿಡಿಗೇಡಿಗಳು ಸುಮ್ಮನೆ ಕರೆ ಮಾಡಿ ಅದನ್ನು ರೆಕಾರ್ಡ್ ಮಾಡಿ ಸೋಶೀಯಲ್ ಮೀಡಿಯಾದಲ್ಲಿ ಹರಿಯಬಿಡುತ್ತಿದ್ದಾರೆ. ಇದು ಇವತ್ತಿಗೆ ಕೊನೆಗೊಳ್ಳಬೇಕು. ನಾಳೆಯಿಂದ ಯಾರಾದರೂ ರೆಕಾರ್ಡ್ ಮಾಡಿ ಅದನ್ನು ವೈರಲ್ ಮಾಡಿದರೆ ಅಂತವರನ್ನು ಮುಲಾಜಿಲ್ಲದೆ ಜೈಲಿಗಟ್ಟುತ್ತೇನೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಕುಂದಾಪುರ ತಾ.ಪಂ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣದ ಕುರಿತು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಕಳೆದ […]