ಉಡುಪಿ: ಸುಬ್ರಹ್ಮಣ್ಯ ನಗರದಲ್ಲಿ ದಿಕ್ಕುತಪ್ಪಿ ಬಂದು, ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ರಕ್ಷಿಸಿ ದೊಡ್ಡಣಗುಡ್ಡೆಯ ಮನೆಗೆ ಸೇರಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ವೃದ್ಧೆ ಮರೆವು ಕಾಯಿಲೆಯಿಂದ ಬಳಲುತ್ತಿದ್ದವರೆಂದು ತಿಳಿದು ಬಂದಿದೆ. ಮನೆಯಿಂದ ಬೆಳಗ್ಗೆ ಹೊರಗೆ ತೆರಳಿದ ವೃದ್ಧೆ, ಮರಳಿ ಮನೆಗೆ ಸೇರಲು ದಿಕ್ಕು ಕಾಣದೆ ರಾತ್ರಿ ಸಮಯದವರೆಗೂ ಅಲೆದಾಟ ನಡೆಸಿದ್ದಾರೆ.
ಸುಬ್ರಹ್ಮಣ್ಯ ನಗರದಲ್ಲಿ ಸ್ಥಳೀಯರು ವೃದ್ಧೆಯನ್ನು ಉಪಚರಿಸಿದ್ದಾರೆ. ನಂತರ ನಗರಸಭೆ ಸದಸ್ಯೆ ಜಯಂತಿ ಪೂಜಾರಿ ಅವರು ನಾಗರಿಕ ಸಮಿತಿಯ ಸಹಾಯವಾಣಿಗೆ ತಿಳಿಸಿದ್ದಾರೆ.
ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ತಕ್ಷಣ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ನಗರಠಾಣೆ ಎ.ಎಸ್. ಐ ವಿಜಯ್ ಸಿ ಅವರು ವೃದ್ಧೆಯ ವಿಳಾಸವನ್ನು ಪತ್ತೆಗೊಳಿಸಿದರು.