ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರವು ನಾಳೆಯಿಂದ (ಜುಲೈ 1) ಪುನರಾರಂಭಗೊಳ್ಳಲಿದೆ.
ಜಿಲ್ಲೆಯಲ್ಲಿ ಒಟ್ಟು 450 ಸರ್ವಿಸ್ ಹಾಗೂ ಸಿಟಿ ಬಸ್ಗಳಿದ್ದು, ಇವುಗಳಲ್ಲಿ ಶೇ.30ರಷ್ಟು ಬಸ್ ಮಾತ್ರ ನಾಳೆಯಿಂದ ರಸ್ತೆಗೆ ಇಳಿಯಲಿದೆ. ಅವು ಗಳಲ್ಲಿ ಕೆಲವು ಬಸ್ಗಳು ಮಂಗಳೂರಿಗೂ ಸಂಚರಿಸಲಿದೆ. ಉಳಿದ ಬಸ್ಗಳನ್ನು ಮುಂದೆ ಹಂತ ಹಂತವಾಗಿ ಓಡಿಸಲಾಗುವುದು. ಅದೇ ರೀತಿ ನಾಳೆಯಿಂದ ಶೇ. 25ರಷ್ಟು ಟಿಕೆಟ್ ದರ ಕೂಡ ಹೆಚ್ಚಿಸಲಾಗುವುದು ಎಂದು ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದ್ದಾರೆ.
ಮಣಿಪಾಲ-ಮಂಗಳೂರು ಪರಿಷ್ಕೃತ ದರ:
‘ಮಣಿಪಾಲ- ಮಂಗಳೂರು ₹100, ಉಡುಪಿ- ಮಂಗಳೂರು ₹95., ಕಾಪು- ಮಂಗಳೂರು ₹70., ಉಚ್ಚಿಲ -ಮಂಗಳೂರು ₹64, ಪಡುಬಿದ್ರಿ- ಮಂಗಳೂರು ₹58., ಮುಲ್ಕಿ- ಮಂಗಳೂರು ₹50., ಕೊಲ್ನಾಡ್- ಮಂಗಳೂರು ₹50, ಕೆಆರ್ಇಸಿ- ಮಂಗಳೂರು ₹40, ಸುರತ್ಕಲ್- ಮಂಗಳೂರು ₹30 ದರ ನಿಗದಿಪಡಿಸಲಾಗಿದೆ.
ಉಡುಪಿಯಿಂದ ಕಾಪು ₹30., ಉಚ್ಚಿಲ ₹34, ಪಡುಬಿದ್ರೆ ₹40., ಮುಲ್ಕಿ 54., ಕೋಲ್ನಾಡ್ 56₹, ಕೆಆರ್ಇಸಿ ₹70., ಸುರತ್ಕಲ್ ಗೆ ₹70 ದರ ನಿಗದಿಪಡಿಸಲಾಗಿದೆ.
ನರ್ಮ್ ಸಂಚಾರ: ಜಿಲ್ಲೆಯಲ್ಲಿ ಈಗಾಗಲೇ ನರ್ಮ್ ಬಸ್ಸುಗಳು ಸಂಚಾರ ಆರಂಭಿಸಿವೆ. ಶಿರ್ವ-ಮಂಚಕಲ್ಲು, ಕಾಪು, ಪಡುಕೆರೆ, ತೆಂಕನಿಡಿಯೂರು, ಹೆಬ್ರಿ, ಹಿರಿಯಡಕ ಹಾಗೂ ಬ್ರಹ್ಮಾವರ ಭಾಗಗಳಿಗೆ ಸಂಚರಿಸುತ್ತಿವೆ. ನಾಳೆಯಿಂದ ಖಾಸಗಿ ಬಸ್ಸುಗಳೂ ಸಂಚಾರ ಮಾಡುವುದರಿಂದ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ.
ಕೆಎಸ್ಆರ್ ಟಿಸಿ ಬಸ್ ದರ ಏರಿಕೆ ಇಲ್ಲ
ಕೆಎಸ್ಆರ್ ಟಿಸಿ ಬಸ್ಸುಗಳಲ್ಲಿ ಈ ಹಿಂದಿನಂತೆಯೇ ಟಿಕೆಟ್ ದರ ಇರಲಿದೆ. ಹಾಗೆ, ಖಾಸಗಿ ಎಕೆಎಂಎಸ್ ಬಸ್ಸುಗಳಲ್ಲಿಯೂ ಈ ಹಿಂದಿನಂತೆಯೇ ಟಿಕೆಟ್ ದರ ಇರಲಿದೆ. ಉಳಿದ ಖಾಸಗಿ ಬಸ್ ಗಳಲ್ಲಿ ದರ ಹೆಚ್ಚಳವಾಗಲಿದೆ.
ಮಣಿಪಾಲ-ಮಂಚಿ ಮಾರ್ಗದಲ್ಲಿ ಅಣ್ಣಪ್ಪ ಟ್ರಾವೆಲ್ಸ್ ನ ಮೂರು ಖಾಸಗಿ ಬಸ್ ಗಳು ನಾಳೆಯಿಂದ ಹಿಂದಿನ ವೇಳಾಪಟ್ಟಿಯಂತೆ (ಟೈಮಿಂಗ್) ಸಂಚಾರ ನಡೆಸಲಿವೆ.