ಉಡುಪಿ: ವ್ಯಕ್ತಿ ನಾಪತ್ತೆ

ಉಡುಪಿ, ಫೆಬ್ರವರಿ 25: ಶಿವಳ್ಳಿ ಗ್ರಾಮದ ರುದ್ರಪ್ರಿಯ ನಗರದ ನಿವಾಸಿ ಅಮರ್ ನಾಯ್ಕ್(29) ಎನ್ನುವ ವ್ಯಕ್ತಿಯು ಗೋವಾದಲ್ಲಿ ಕೆಲಸದಲ್ಲಿದ್ದು ಕೆಲದಿನಗಳ ಹಿಂದೆ ಮನೆಗೆ ಮರಳಿದ್ದು ಉಡುಪಿಗೆ ಹೋಗಿ ಬರುತ್ತೇನೆಂದು ಹೋದವರು ಮನೆಗೆ ಬಾರದೆ ನಾಪತ್ತೆಯಾಗಿರುತ್ತಾರೆ.

5 ಅಡಿ 3 ಇಂಚು ಎತ್ತರ ಎಣ್ಣೆ ಕಪ್ಪು ಮೈಬಣ್ಣ ಅಗಲ ಮುಖ ಹೊಂದಿದ್ದು ಕನ್ನಡ, ತುಳು, ಹಿಂದಿ ಮಾತಾಡಬಲ್ಲವರಾಗಿರುತ್ತಾರೆ. ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ನಿರೀಕ್ಷಕರು ದೂ.ಸಂ: 9480805448, ಪಿ.ಎಸ್.ಐ ಮಣಿಪಾಲ ಠಾಣೆ ದೂ.ಸಂ:9480805475/8277988945, ಮಣಿಪಾಲ ಪೊಲೀಸ್ ಠಾಣೆ ದೂ.ಸಂ:0820-2526444 ಅನ್ನು ಸಂಪರ್ಕಿಸುವAತೆ ಮಣಿಪಾಲ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.