ಉಡುಪಿ: ವ್ಯಕ್ತಿ ನಾಪತ್ತೆ

ಉಡುಪಿ, ಫೆಬ್ರವರಿ 25: ಶಿವಳ್ಳಿ ಗ್ರಾಮದ ರುದ್ರಪ್ರಿಯ ನಗರದ ನಿವಾಸಿ ಅಮರ್ ನಾಯ್ಕ್(29) ಎನ್ನುವ ವ್ಯಕ್ತಿಯು ಗೋವಾದಲ್ಲಿ ಕೆಲಸದಲ್ಲಿದ್ದು ಕೆಲದಿನಗಳ ಹಿಂದೆ ಮನೆಗೆ ಮರಳಿದ್ದು ಉಡುಪಿಗೆ ಹೋಗಿ ಬರುತ್ತೇನೆಂದು ಹೋದವರು ಮನೆಗೆ ಬಾರದೆ ನಾಪತ್ತೆಯಾಗಿರುತ್ತಾರೆ. 5 ಅಡಿ 3 ಇಂಚು ಎತ್ತರ ಎಣ್ಣೆ ಕಪ್ಪು ಮೈಬಣ್ಣ ಅಗಲ ಮುಖ ಹೊಂದಿದ್ದು ಕನ್ನಡ, ತುಳು, ಹಿಂದಿ ಮಾತಾಡಬಲ್ಲವರಾಗಿರುತ್ತಾರೆ. ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ನಿರೀಕ್ಷಕರು ದೂ.ಸಂ: 9480805448, ಪಿ.ಎಸ್.ಐ ಮಣಿಪಾಲ ಠಾಣೆ ದೂ.ಸಂ:9480805475/8277988945, ಮಣಿಪಾಲ ಪೊಲೀಸ್ […]

ಕರಾವಳಿಯ ಪ್ರಸಿದ್ಧ ಖಾಸಗಿ ಕಂಪೆನಿಯಲ್ಲಿ ಉದ್ಯೋಗವಕಾಶ!

ಉಡುಪಿ:ಉಡುಪಿ ಹಾಗೂ ಮಂಗಳೂರಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಲಭ್ಯವಿರುವ ಹುದ್ದೆಗಳು: 🔹ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ 🔹ಆಫೀಸ್ ಸ್ಟಾಫ್ (ಮಹಿಳೆ) 🔹HR ಎಕ್ಸಿಕ್ಯೂಟಿವ್ 🔹ಅಕೌಂಟ್ಸ್ ಅಸಿಸ್ಟೆಂಟ್ 🔹ರಿಸೆಪ್ಷನಿಸ್ಟ್ 🔹ವಿಡಿಯೋ ಎಡಿಟರ್ ಮಾಹಿತಿಗಾಗಿ ಸಂಪರ್ಕಿಸಿ :📞 6360343209, 📞9632298960

ಕಡಿಮೆ ಗುಣಮಟ್ಟದ ಹಾಲು ಸ್ವೀಕರಿಸಲು ಅವಕಾಶ- ರವಿರಾಜ್ ಹೆಗ್ಡೆ

ಉಡುಪಿ: ಹಾಲು ಉತ್ಪಾದಕರ ಸಂಘದಲ್ಲಿ ಈ ಹಿಂದೆ ಕಡಿಮೆ ಗುಣಮಟ್ಟದ ಹಾಲನ್ನು ಸ್ವೀಕರಿಸದೆ ತಿರಸ್ಕಾರ ಮಾಡಲಾಗುತ್ತಿತ್ತು. ಮುಂದಿನ ಹಂತದಲ್ಲಿ ಕಡಿಮೆ ಗುಣಮಟ್ಟದ ಹಾಲನ್ನು ಕೂಡ ಸ್ವೀಕರಿಸಲು ಸಂಘದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಅವರಿಗೆ ಸರಕಾರದ 5ರೂ. ಅನುದಾನ ಇರುವುದಿಲ್ಲ ಹಾಗೂ ದರದಲ್ಲಿಯೂ ವ್ಯಾತ್ಯಾಸ ಇರುತ್ತದೆ ಎಂದು ದ.ಕ ಹಾಲು ಸಹಕಾರಿ ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದರು. ಅವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ., ಉಡುಪಿ […]

ವೀರಪ್ಪ ಮೊಯಿಲಿಯ ಬಡವರ ಪರ ನಿಲುವು ಪ್ರಶಂಸಾರ್ಹ

ಉಡುಪಿ:ವೈಚಾರಿಕ ಮತ್ತು ವೈಜ್ಞಾನಿಕತೆಯ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದೇ ಅದರ ಮೂಲ ಉದ್ದೇಶವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಕಿಸಾನ್ ಸಭಾ ಸಭಾಂಗಣದ ಉದ್ಘಾಟಿಸಿ, ಟ್ರಸ್ಟ್ ನ ಮಹಾತ್ಮಾ ಗಾಂಧಿ ಪ್ರೌಢ ಶಾಲೆಯ35 ನೇ ವರ್ಷದ ಸಮಾರಂಭ ವನ್ನು ಉದ್ಘಾಟಿಸಿದ ನಂತರ ಮಾತನಾಡಿದರು. ಪ್ರಾಮಾಣಿಕ ರಾಜಕಾರಣಿ:ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಾ, ತಾನು ಕುಟುಂಬದ ಮೊದಲ ಪದವೀಧರನಾಗಿದ್ದು, ವೀರಪ್ಪ ಮೊಯಿಲಿಯವರಂತೆ ತಾನೂ ಕಷ್ಟದ ಜೀವನವನ್ನು ಕಂಡಿರುವುದಾಗಿ ತಿಳಿಸಿದರು. ವೀರಪ್ಪ ಮೊಯಿಲಿಯವರು ಸಮಾಜದ ಬಡವರ್ಗದವರ […]

ಖಾಲಿಯಿರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು-ಮುಖ್ಯಮಂತ್ರಿ ಸಿದ್ದರಾಮಯ್ಯ

ಉಡುಪಿ: ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಹಂತಹಂತವಾಗಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಕಾರ್ಕಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.ಉದ್ಯೋಗ ಒದಗಿಸುವ ಭರವಸೆಯನ್ನು ಸರ್ಕಾರ ನೀಡುತ್ತದೆ. ಒಳಮೀಸಲಾತಿಯ ಕಾರಣ ನೇಮಕಾತಿ ಪ್ರಕ್ರಿಯೆ ವಿಳಂಬವಾಯಿತು. ಪ್ರಸ್ತುತ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದರು. ಆನೆದಾಳಿ:ಬ್ಯಾರಿಕೇಡ್ ನಿರ್ಮಾಣಕ್ಕೆ ಕ್ರಮ: ಚಿಕ್ಕಮಗಳೂರಿನಲ್ಲಿ ಅನೆ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಉತ್ತರಿಸುತ್ತಾ, ಅನೆ, ಚಿರತೆ ಮತ್ತು ಹುಲಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ, ಮಾನವ ವನ್ಯಪ್ರಾಣಿ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ವನ್ಯಜೀವಿಗಳು ಜನಪ್ರದೇಶಗಳಿಗೆ ಬರದಂತೆ […]