ಉಡುಪಿ:ಪೇಪರ್‌ಲೆಸ್ ರಿಜಿಸ್ಟ್ರೇಷನ್ ತರಬೇತಿ

ಉಡುಪಿ: ರಾಜ್ಯದಾದ್ಯಂತ ಪೇಪರ್‌ಲೆಸ್ ರಿಜಿಸ್ಟ್ರೇಷನ್ ವ್ಯವಸ್ಥೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಪೇಪರ್ ಲೆಸ್ ರಿಜಿಸ್ಟ್ರೇಷನ್ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳ ಸಿಬ್ಬಂದಿಗಳು ಹಾಗೂ ಪೇಪರ್‌ಲೆಸ್ ರಿಜಿಸ್ಟ್ರೇಷನ್ ವ್ಯವಸ್ಥೆಯಲ್ಲಿ ಆಸಕ್ತಿ ಹೊಂದಿರುವ ಸಾರ್ವಜನಿಕರು ತರಬೇತಿಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಜನವರಿ 29 ರಂದು ಮಧ್ಯಾಹ್ನ 12 ರಿಂದ ಬೈಂದೂರು ಹಾಗೂ ಸಂಜೆ 4 ರಿಂದ ಕುಂದಾಪುರ ಉಪನೋಂದಣಿ ಕಚೇರಿಯಲ್ಲಿ, ಜನವರಿ 30 ರಂದು ಮಧ್ಯಾಹ್ನ 12 ರಿಂದ ಶಂಕರನಾರಾಯಣ ಹಾಗೂ ಸಂಜೆ 4 ರಿಂದ ಬ್ರಹ್ಮಾವರ ಉಪನೋಂದಣಿ ಕಚೇರಿಯಲ್ಲಿ ಮತ್ತು ಜನವರಿ 31 ರಂದು ಮಧ್ಯಾಹ್ನ 12 ರಿಂದ ಕಾರ್ಕಳ ಹಾಗೂ ಸಂಜೆ 4 ರಿಂದ ಉಡುಪಿ ಉಪನೋಂದಣಿ ಕಚೇರಿಯಲ್ಲಿ ತರಬೇತಿ ನಡೆಯಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.