ಬೈಂದೂರು: ಕೆಲಸಕ್ಕೆಂದು ತೆರಳಿದ ವ್ಯಕ್ತಿ ನಾಪತ್ತೆ.

ಉಡುಪಿ, ಜ.28: ಬೈಂದೂರು ತಾಲೂಕು ಯೆಳಜಿತ್ ಗ್ರಾಮದ ಅರೆಹೊಳೆ ಎಣ್ಣೆಮಕ್ಕಿ ನಿವಾಸಿ ಸೀತಾರಾಮ ಪೂಜಾರಿ (40) ಎಂಬ ವ್ಯಕ್ತಿಯು 2024 ರ ಫೆಬ್ರವರಿ 18 ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಮನೆಯಿಂದ ಕೆಲಸಕ್ಕೆಂದು ಹೋದವರು ವಾಪಾಸು ಬಾರದೇ ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿರುತ್ತಾರೆ. 5 ಅಡಿ 5 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆ ದೂ.ಸಂಖ್ಯೆ: […]

ಮಣಿಪಾಲದ ಗುರುವಸಂತಿ ಸಾಂಸ್ಕೃತಿಕ ವೇದಿಕೆಯ ದಶಮಾನೋತ್ಸವ ಸಂಭ್ರಮ ನಾಟಕೋತ್ಸವ

ಉಡುಪಿ: ಆಧುನಿಕ ಕಾಲಘಟ್ಟದಲ್ಲಿ ಇಂಟರ್‌ನೆಟ್‌ನಲ್ಲಿ ಮುಳುಗಿರುವ ಜನರನ್ನು ನಾಟಕದತ್ತ ಸೆಳೆಯುವುದು ಸುಲಭ ಸಾಧ್ಯವಲ್ಲ. ಇದು ಉತ್ತಮ ನಾಟಕಗಳಿಂದ ಮಾತ್ರ ಸಾಧ್ಯ. ಆದರೆ ಈ ಉತ್ತಮ ನಾಟಕಗಳು ಸದಾಭಿರುಚಿಯ ಪ್ರೇಕ್ಷಕರಿಂದ ಮಾತ್ರ ಯಶಸ್ವಿಯಾಗ ಬಲ್ಲವು ಎಂದು ರಂಗಭೂಮಿ ಉಡುಪಿ ಅಧ್ಯಕ್ಷರು ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿರುವ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಸೋಮವಾರ ಪರ್ಕಳದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಮಣಿಪಾಲದ ಗುರುವಸಂತಿ ಸಾಂಸ್ಕೃತಿಕ ವೇದಿಕೆಯ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಅಧ್ಯಕ್ಷ ಜಯರಾಮ ಮಣಿಪಾಲ […]

ಸಾಮಾಜಿಕ ಬದ್ಧತೆ ಹೊಂದಿದ್ದ ನಾಯಕ ಅಜಿತ್‌ ಪವಾರ್‌ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಬೆಂಗಳೂರು: ಮಹಾರಾಷ್ಟ್ರ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅಜಿತ್‌ ಪವಾರ್‌, ಸಾಮಾಜಿಕ ಬದ್ಧತೆ ಹೊಂದಿದ್ದ ನಾಯಕರಾಗಿದ್ದರು. ಜನರ ಮಧ್ಯೆ ಇರುವ ನಾಯಕನಾಗಿ ಜನಾನುರಾಗಿ ಹೆಸರಾಗಿದ್ದರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಬಣ್ಣಿಸಿದರು. ವಿಧಾನಸಭೆಯಲ್ಲಿ ಸಂತಾಪ ಸೂಚಿಸಿ ಮಾತನಾಡಿದ ಸಚಿವರು, ಮಹಾರಾಷ್ಟ್ರಕ್ಕೆ ಗಡಿ ಭಾಗದಲ್ಲಿರುವ ಕಾರಣ ಬೆಳಗಾವಿಯಲ್ಲಿ ಅಜಿತ್‌ ಪವಾರ್‌ ಅವರ ಅನುಯಾಯಿಗಳು ಸಾಕಷ್ಟಿದ್ದಾರೆ. ಗ್ರಾಮೀಣಾಭಿವೃದ್ಧಿ, ನೀರಾವರಿ, ಕೈಗಾರಿಕಾ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಅಜಿತ್‌ ಪವಾರ್‌, ಮಹಾರಾಷ್ಟ್ರ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು […]

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಫೆಬ್ರವರಿ 3 ರಂದು ಇಂಟಿಗ್ರೇಟೆಡ್ ಲಿವರ್ & ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

ಮಣಿಪಾಲ: ಮನೆಯ ಸಮೀಪದಲ್ಲಿ ಲಿವರ್ (ಯಕೃತ್ತಿನ) ಆರೈಕೆಗೆ ಪ್ರವೇಶವನ್ನು ಬಲಪಡಿಸುವ ಸಲುವಾಗಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಫೆಬ್ರವರಿ 3, 2026 ರ ಮಂಗಳವಾರ ಬೆಳಿಗ್ಗೆ 10.00 ರಿಂದ ಸಂಜೆ 4.00 ರವರೆಗೆ ತನ್ನ ಮುಂದಿನ ಇಂಟಿಗ್ರೇಟೆಡ್ ಲಿವರ್ & ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್ ಅನ್ನು ನಡೆಸಲಿದೆ. ಈ ಕ್ಲಿನಿಕ್ ಪ್ರತಿ ತಿಂಗಳ ಮೊದಲ ಮಂಗಳವಾರ ನಡೆಯಲಿದೆ. ಈ ಕ್ಲಿನಿಕ್ ವಿಶೇಷವಾಗಿ ಲಿವರ್ ಮತ್ತು ಲಿವರ್ ಕಸಿ ಸೇವೆಗಳನ್ನು ನೀಡುತ್ತದೆ, ಇದು ದೂರದ ಪ್ರಯಾಣವಿಲ್ಲದೆ ಆರಂಭಿಕ ರೋಗನಿರ್ಣಯ, ತಜ್ಞರ ಮೌಲ್ಯಮಾಪನ […]

ಉಡುಪಿ:ನೀಟ್ / ಸಿಇಟಿ ವಿದ್ಯಾರ್ಥಿಗಳಿಗೆ ನಲಂದಾ ಎಕ್ಸಲೆನ್ಸ್ ಕ್ರ್ಯಾಶ್ ಕೋರ್ಸ್ ಆರಂಭ

ಉಡುಪಿ:ನಲಂದಾ ಎಕ್ಸಲೆನ್ಸ್ (ಹಿಂದಿನ ವಿನಯ್‌ಸ್ ಅಕಾಡೆಮಿ) ವತಿಯಿಂದ ನೀಟ್ ಮತ್ತು ಸಿಇಟಿ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗಾಗಿ ವಿಶೇಷ ಕ್ರ್ಯಾಶ್ ಕೋರ್ಸ್‌ ಆರಂಭಿಸಲಾಗುತ್ತಿದೆ. ಈ ಕೋರ್ಸ್‌ ಮಾರ್ಚ್ 18ರಿಂದ ಪ್ರಾರಂಭವಾಗಲಿದೆ. ಸಿಇಟಿ ರಾಜ್ಯ ರ್ಯಾಂಕ್ 80 ಸೇರಿದಂತೆ, 600ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಅನೇಕ ನೀಟ್ ವಿದ್ಯಾರ್ಥಿಗಳ ಯಶಸ್ಸಿನ ದಾಖಲೆಯೊಂದಿಗೆ ನಲಂದಾ ಎಕ್ಸಲೆನ್ಸ್‌ ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದೆ. ಈ ಕ್ರ್ಯಾಶ್ ಕೋರ್ಸ್‌ ಮೂಲಕ ವಿಷಯಗಳ ಪೂರಕ ತಿಳುವಳಿಕೆ, ಅಂಕಗಳ ಶುದ್ಧತೆ ಹಾಗೂ ಪರೀಕ್ಷಾ ಆತ್ಮವಿಶ್ವಾಸವನ್ನು ಹೆಚ್ಚಿಸುವ ಉದ್ದೇಶ […]