ಉಡುಪಿ: ಖ್ಯಾತ ಹಿರಿಯ ವಾದ್ಯ ಸಂಗೀತಗಾರ ಶತಾಯುಷಿ ಕುಕ್ಕಿಕಟ್ಟೆಯ ಮಾರ್ಪಳ್ಳಿ ಕಾಳು ಶೇರಿಗಾರ್ (104) ಕೋವಿಡ್ ಸೋಂಕಿನಿಂದ ಸೋಮವಾರ (ಮೇ 10) ನಿಧನ ಹೊಂದಿದರು.
ಇವರು ವಾದ್ಯ ಸಂಗೀತದ ಮೂಲಕ ಅಪಾರ ಜನಮನ್ನಣೆಗಳಿಸಿದ್ದಾರೆ. ಕೊಡುಗೈ ದಾನಿಯೂ, ಸ್ವಾಭಿಮಾನಿಯೂ ಆದ ಕಾಳು ಶೇರಿಗಾರ್ ಅವರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಫಲಿಸದೆ ಇಂದು ನಿಧನ ಹೊಂದಿದ್ದಾರೆ.
ಅವರು 2 ಗಂಡು, 3 ಹೆಣ್ಣುಮಕ್ಕಳು ಹಾಗೂ ಅಪಾರ ಅಭಿಮಾನಿಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.