ಉಡುಪಿ: ಈದ್ ಉಲ್ ಫಿತರ್ ಹಬ್ಬದ ಪ್ರಯುಕ್ತ ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್
ಸಭಾ ಪದಾಧಿಕಾರಿಗಳು ಬುಧವಾರ ಮಸೀದಿಗೆ ತೆರಳಿ ಮುಸ್ಲಿಂ ಬಾಂಧವರೊಂದಿಗೆ
ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಪದಾಧಿಕಾರಿಗಳು ಉಡುಪಿಯ ಜಾಮೀಯಾ ಮಸೀದಿಗೆ ತೆರಳಿ ಮುಸ್ಲಿಂ ಸಮುದಾಯದ ಧರ್ಮಗುರುಗಳು ಹಾಗೂ ಮುಸ್ಲಿಂ ಬಾಂಧವರೊಂದಿಗೆ ಹಸಿರು ಗಿಡ ನೀಡುವ ಮೂಲಕ ಈದ್ ಹಬ್ಬದ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್‌ನ ಆಧ್ಯಾತ್ಮಿಕ
ನಿರ್ದೇಶಕ ಫರ್ಡಿನಾಂಡ್ ಗೊನ್ಸಾಲ್ವಿಸ್, ಸೌಹಾರ್ದತೆಯನ್ನು ಕಾಯ್ದುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.
ಈ ವೇಳೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಆಧ್ಯಾತ್ಮಿಕ ನಿರ್ದೇಶಕರಾದ ವಂ|ಫರ್ಡಿನಾಂಡ್
ಗೊನ್ಸಾಲ್ವಿಸ್ ಮಸೀದಿಯ ಧರ್ಮಗುರುಗಳಾದ ಮೌಲಾನಾ ರಶೀದ್ ಅಹ್ಮದ್ ನದ್ವಿಯವರಿಗೆ
ಕ್ರೈಸ್ತ ಸಮುದಾಯದ ಪರವಾಗಿ ಸನ್ಮಾನಿಸಿದರು. ಮುಸ್ಲಿಂ ಬಂಧುಗಳು ಕ್ರೈಸ್ತ ನಾಯಕರಿಗೆ
ಸಿಹಿ ಹಂಚಿ ಹಬ್ಬದ ಶುಭಾಶಯ ಕೋರಿದರು
ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್,
ಕಾರ್ಯದರ್ಶಿ ಸಂತೋಷ್ ಕರ್ನೆಲಿಯೊ, ಸಹಕಾರ್ಯದರ್ಶಿ ಗ್ರೆಗೋರಿ ಡಿಸೋಜಾ, ಮಾಜಿ
ಅಧ್ಯಕ್ಷರಾದ ಎಲ್ ರೋಯ್ ಕಿರಣ್ ಕ್ರಾಸ್ತಾ,ವಲೇರಿಯನ್ ಫೆರ್ನಾಂಡಿಸ್, ಪದಾಧಿಕಾರಿಗಳಾದ
ರಫಾಯಲ್ ಡಿಸೋಜಾ, ಜೆರಾಲ್ಡ್ ರೊಡ್ರಿಗಸ್, ಜಾಮೀಯಾ ಮಸೀದಯ ಅಧ್ಯಕ್ಷರಾದ ಸೈಯ್ಯದ್ಯಾಸೀನ್, ಕಾರ್ಯದರ್ಶಿ ಖಲೀಲ್ ಅಹ್ಮದ್, ಸದಸ್ಯರಾದ ಮುನೀರ್ ಅಹಮ್ಮದ್, ವಿಎಸ್ ಉಮರ್, ಅಶ್ಫಾಕ್ ಅಹಮ್ಮದ್, ಶಾಹಿದ್ ಆಲಿ, ಮಹಮ್ಮದ್ ಮರಕಡ ಮತ್ತು ಖಾಲಿದ್ ಉಪಸ್ಥಿತರಿದ್ದರು.












