ತಿರುಪತಿಯಲ್ಲಿ ನಾಪತ್ತೆಯಾದ ಉಡುಪಿ ಮೂಲದ ವ್ಯಕ್ತಿ; ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿಕೆ

ಉಡುಪಿ: ಉಡುಪಿ ಜಿಲ್ಲೆಯ ಅಂಬಲಪಾಡಿ ಸಮೀಪದ ಕಡೆಕರ್ ನಿವಾಸಿ ಸುಂದರ ಪೂಜಾರಿ (65) ಅವರು ತಿರುಪತಿ ಪ್ರವಾಸದ ವೇಳೆ ನಾಪತ್ತೆಯಾಗಿದ್ದು, ಕುಟುಂಬಸ್ಥರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ಜುಲೈ 27, 2026ರಂದು ತಿರುಪತಿಗೆ ತೆರಳಿದ್ದ ಅವರು, ತಿರುಮಲ ತಿರುಪತಿ ದೇವಸ್ಥಾನದ U4 ಗೇಟ್ ಪ್ರದೇಶದಲ್ಲಿ ಕಾಣೆಯಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಸುಂದರ ಪೂಜಾರಿ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಕುಟುಂಬಸ್ಥರನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

ಸಂಪರ್ಕ ಸಂಖ್ಯೆ:

• 📞 73385 02989

• 📞 98447 42566

• 📞 98446 79277

ವಿಳಾಸ: ಕಂಬಳಕಟ್ಟ ಹೌಸ್, ಕಡೆಕರ್, ಅಂಬಲಪಾಡಿ, ಉಡುಪಿ.

ಸುಂದರ ಪೂಜಾರಿ ಅವರ ಸುಳಿವು ದೊರೆತಲ್ಲಿ ಮೇಲ್ಕಂಡ ಸಂಖ್ಯೆಗಳಿಗೆ ಮಾಹಿತಿ ನೀಡುವ ಮೂಲಕ ಕುಟುಂಬದವರಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.