ತಿರುಪತಿಯಲ್ಲಿ ನಾಪತ್ತೆಯಾದ ಉಡುಪಿ ಮೂಲದ ವ್ಯಕ್ತಿ; ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿಕೆ

ಉಡುಪಿ: ಉಡುಪಿ ಜಿಲ್ಲೆಯ ಅಂಬಲಪಾಡಿ ಸಮೀಪದ ಕಡೆಕರ್ ನಿವಾಸಿ ಸುಂದರ ಪೂಜಾರಿ (65) ಅವರು ತಿರುಪತಿ ಪ್ರವಾಸದ ವೇಳೆ ನಾಪತ್ತೆಯಾಗಿದ್ದು, ಕುಟುಂಬಸ್ಥರು ಸಾರ್ವಜನಿಕರ ಸಹಕಾರ ಕೋರಿದ್ದಾರೆ. ಜುಲೈ 27, 2026ರಂದು ತಿರುಪತಿಗೆ ತೆರಳಿದ್ದ ಅವರು, ತಿರುಮಲ ತಿರುಪತಿ ದೇವಸ್ಥಾನದ U4 ಗೇಟ್ ಪ್ರದೇಶದಲ್ಲಿ ಕಾಣೆಯಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಸುಂದರ ಪೂಜಾರಿ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಕುಟುಂಬಸ್ಥರನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ. ಸಂಪರ್ಕ ಸಂಖ್ಯೆ: • 📞 73385 02989 • 📞 […]

ಆ.1ರಂದು ದ.ಕ. ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯು ಕಾಲೇಜಿಗೆ ರಜೆ ಘೋಷಣೆ

ಮಂಗಳೂರು: ಹವಾಮಾನ ಇಲಾಖೆಯು ಭಾರೀ ಮಳೆಯ ಮುನ್ಸೂಚನೆ ನೀಡಿರುವ ಕಾರಣ ದ.ಕ. ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಆ. 1ರ ಶನಿವಾರ ರಜೆ ಘೋಷಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಣಿಪಾಲದಲ್ಲಿ ಟ್ರಾಫಿಕ್ ಜಾಮ್: ಒಂದು ತಾಸುಗಿಂತಲೂ ಹೆಚ್ಚು ಕಾಲ ವಾಹನ ಸವಾರರ ಪರದಾಟ

ಉಡುಪಿ: ಮಣಿಪಾಲದ ರಾಷ್ಟ್ರೀಯ ಹೆದ್ದಾರಿ 169(ಎ)ರ ರಸ್ತೆ ಬದಿಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡಿದ್ದರಿಂದ ಶುಕ್ರವಾರ ಸಂಜೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸಿದರು. ಮಣಿಪಾಲದ ಗ್ರೀನ್ ಪಾರ್ಕ್‌ನಿಂದ ಸಿಂಡಿಕೇಟ್ ಸರ್ಕಲ್‌ವರೆಗೆ ವಾಹನಗಳ ಸಾಲು ಹಲವು ಕಿಲೋಮೀಟರ್‌ಗಳಷ್ಟು ವಿಸ್ತರಿಸಿತ್ತು. ಕಚೇರಿ ಅವಧಿ ಮುಗಿಸಿ ಮನೆಗೆ ತೆರಳುತ್ತಿದ್ದ ನೌಕರರು ಹಾಗೂ ಸಾರ್ವಜನಿಕರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡಿದರು. ಟ್ರಾಫಿಕ್ ಜಾಮ್‌ನ ಮಧ್ಯೆ ಆ್ಯಂಬುಲೆನ್ಸ್ ಕೂಡ ಸಿಲುಕಿಕೊಂಡಿದ್ದು, […]

ಕಂಬೈನ್ಡ್ ಹಾರ್ವೆಸ್ಟರ್ ಹಬ್ ರಚನೆ: ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ಕೃಷಿ ಇಲಾಖೆಯ ವತಿಯಿಂದ ರಾಜ್ಯ ವಲಯ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಕಂಬೈನ್ಡ್ ಹಾರ್ವೆಸ್ಟರ್ ಹಬ್ ರಚನೆಗೆ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ರೈತರು ಪಹಣಿ, ಆಧಾರ್ ಪ್ರತಿ, ಬ್ಯಾಂಕ್ ಖಾತೆಯ ವಿವರದ ಪ್ರತಿ, ನಿಗಧಿತ ಛಾಪಾ ಕಾಗದದಲ್ಲಿ ಹಬ್ ಪರಭಾರೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಇತ್ಯಾದಿ ಅಗತ್ಯ ದಾಖಲಾತಿಗಳೊಂದಿಗೆ ನಿಗಧಿತ ನಮೂನೆಯಲ್ಲಿ ವಿವರ ಭರ್ತಿ ಮಾಡಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಆಗಸ್ಟ್ 19 ರ ಒಳಗಾಗಿ […]

ಮಣಿಪಾಲ MSDC ಯಿಂದ ಉಚಿತ ರೊಬೋಟಿಕ್ಸ್ ಕಾರ್ಯಾಗಾರ, ಆಸಕ್ತರು ಮಿಸ್ ಮಾಡ್ಕೊಬೇಡಿ

ಮಣಿಪಾಲ: ರೊಬೋಟಿಕ್ಸ್ ಹಾಗೂ ಆಟೊಮೇಷನ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮತ್ತು ತಂತ್ರಜ್ಞಾನ ಪ್ರಿಯರಿಗಾಗಿ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ ಉಚಿತ ರೊಬೋಟಿಕ್ಸ್ ವರ್ಕ್‌ಶಾಪ್ ಆಯೋಜಿಸಲಾಗಿದೆ. ಆಗಸ್ಟ್ 8 ಮತ್ತು 9ರಂದು ನಡೆಯಲಿರುವ ಈ ಕಾರ್ಯಾಗಾರವು ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಮಣಿಪಾಲದ MSDC ಕಟ್ಟಡ, ಡಾ. ಟಿ.ಎಂ.ಎ. ಪೈ ಕ್ಯಾಂಪಸ್, ಈಶ್ವರನಗರದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಾಗಾರದಲ್ಲಿ ರೊಬೋಟಿಕ್ಸ್ ಮೂಲಭೂತ ಅಂಶಗಳು, ಅಡ್ವಾನ್ಸ್ಡ್ ಕಂಟ್ರೋಲ್ ಮತ್ತು ಪ್ರೋಗ್ರಾಮಿಂಗ್, ಹಾಗೂ ರೊಬೋಟ್ […]