ಮಣಿಪಾಲ: ಡಾ. ಟಿ.ಎಂ.ಎ. ಪೈ ಫೌಂಡೇಶನ್ನ ಘಟಕದ ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ನೆಕ್ಸ್ಟ್ ಜನರೇಶನ್ AI ಎನ್ನುವ ಕಾರ್ಯಾಗಾರ ಮಾರ್ಚ್ 14 ರಂದು ಬೆಳಿಗ್ಗೆ 9 ರಂದು ನಡೆಯಲಿದೆ. Gen-AI ಕೌಶಲ್ಯಗಳೊಂದಿಗೆ ಇಂಜಿನಿಯರಿಂಗ್ ಕೌಶಲ್ಯಗಳನ್ನೂ ಜಾಸ್ತಿಗೊಳಿಸುವ ಕಾರ್ಯಾಗಾರ ಇದಾಗಿದೆ. ನೆಕ್ಸ್ಟ್ ಜನರೇಶನ್ AI ಕೌಶಲ್ಯಗಳನ್ನು ಈ ಕಾರ್ಯಾಗಾರ ಹೇಳಿಕೊಡಲಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ರಾಜಲಕ್ಷ್ಮಿ ಆನಂದನ್ ಸೆಂಟರ್ ಹೆಡ್, School of IT Skills, MSDC, ಡಾ. ಶ್ವೇತಾ ಪೈ ಸಹ ಪ್ರಾಧ್ಯಾಪಕಿ, MIT ಮಣಿಪಾಲ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಡಾ. ಅರ್ಚನಾ ಪ್ರವೀಣ್ ಕುಮಾರ್ ಸಹ ಪ್ರಾಧ್ಯಾಪಕಿ, MIT ಮಣಿಪಾಲ್ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಪ್ರೊ. ಪ್ರಿಯಾ ಕಾಮತ್ ಸಹ ಪ್ರಾಧ್ಯಾಪಕಿ, MIT ಮಣಿಪಾಲ್ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಇವರು ಭಾಗವಹಿಸಲಿದ್ದಾರೆ. ಕಾರ್ಯಾಗಾರದ ನೋಂದಣಿ ಶುಲ್ಕ ರೂ. 750/- (ಮಧ್ಯಾಹ್ನದ ಊಟ ಮತ್ತು ಉಪಹಾರ ಸೇರಿದೆ).


















