ಉಡುಪಿ:ಮಲ್ಹಾರ್ ಎಕ್ಸಿಬಿಟರ್ಸ್ ವತಿಯಿಂದ 3ನೇ ಗ್ರ್ಯಾಂಡ್ ಎಕ್ಸಿಬಿಷನ್ ಕಾರ್ಯಕ್ರಮ

ಉಡುಪಿ: ಮಲ್ಹಾರ್ ಎಕ್ಸಿಬಿಟರ್ಸ್ ಮತ್ತು ಈವೆಂಟ್ ಪ್ರೊಮೋಟರ್ಸ್ ವತಿಯಿಂದ ಆಯೋಜಿಸಲಾದ 3ನೇ ಗ್ರ್ಯಾಂಡ್ ಎಕ್ಸಿಬಿಷನ್ ಇಂದು (ಮಾ.14 ಶನಿವಾರ)ಯಶಸ್ವಿಯಾಗಿ ನಡೆಯಿತು.

ಬೆಳಿಗ್ಗೆ 10.45ಕ್ಕೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸೀಮಾ ಸುಧೀರ್ (ಕೀರ್ತಿ ಕನ್‌ಸ್ಟ್ರಕ್ಷನ್, ಉಡುಪಿ), ತಾರ ಪ್ರಕಾಶ್ ಚಂದ್ರ ಶೆಟ್ಟಿ (ಜಿಎಂ, ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ), ಡಾ. ಶ್ರುತಿ ಬಲ್ಲಾಳ್ (ಡಯಾಬೆಟಾಲಜಿಸ್ಟ್, ಬಿಗ್ ಮೆಡಿಕಲ್ ಸೆಂಟರ್, ಉಡುಪಿ) ಮತ್ತು ಡಾ. ಶಕೀಲಾ ಸಚಿನ್ (ಮಂಜುನಾಥ್ ಐ ಹಾಸ್ಪಿಟಲ್, ಸುರತ್ಕಲ್/ಕುಂದಾಪುರ/ಉಡುಪಿ) ಉಪಸ್ಥಿತರಿದ್ದರು.

ಪ್ರದರ್ಶನದಲ್ಲಿ ಸೀರೆಗಳು, ಆಭರಣಗಳು, ಹ್ಯಾಂಡ್‌ಬ್ಯಾಗ್‌ಗಳು ಸೇರಿದಂತೆ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.ಕಾರ್ಯಕ್ರಮವನ್ನು ವೀಣಾ ಜೀವನ್ ಶೆಟ್ಟಿ ಮತ್ತು ವೈಶಾಲಿ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಹಳೆಯ ಕಾಂಚಿ ಸೀರೆಗಳನ್ನು ವಿನಿಮಯ ಮಾಡಿ ಉತ್ತಮ ಬೆಲೆ ಪಡೆಯುವ ಅವಕಾಶವೂ ಕಲ್ಪಿಸಲಾಗಿತ್ತು.