ಉಡುಪಿ:ಮಲ್ಹಾರ್ ಎಕ್ಸಿಬಿಟರ್ಸ್ ವತಿಯಿಂದ 3ನೇ ಗ್ರ್ಯಾಂಡ್ ಎಕ್ಸಿಬಿಷನ್ ಕಾರ್ಯಕ್ರಮ

ಉಡುಪಿ: ಮಲ್ಹಾರ್ ಎಕ್ಸಿಬಿಟರ್ಸ್ ಮತ್ತು ಈವೆಂಟ್ ಪ್ರೊಮೋಟರ್ಸ್ ವತಿಯಿಂದ ಆಯೋಜಿಸಲಾದ 3ನೇ ಗ್ರ್ಯಾಂಡ್ ಎಕ್ಸಿಬಿಷನ್ ಇಂದು (ಮಾ.14 ಶನಿವಾರ)ಯಶಸ್ವಿಯಾಗಿ ನಡೆಯಿತು. ಬೆಳಿಗ್ಗೆ 10.45ಕ್ಕೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸೀಮಾ ಸುಧೀರ್ (ಕೀರ್ತಿ ಕನ್‌ಸ್ಟ್ರಕ್ಷನ್, ಉಡುಪಿ), ತಾರ ಪ್ರಕಾಶ್ ಚಂದ್ರ ಶೆಟ್ಟಿ (ಜಿಎಂ, ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ), ಡಾ. ಶ್ರುತಿ ಬಲ್ಲಾಳ್ (ಡಯಾಬೆಟಾಲಜಿಸ್ಟ್, ಬಿಗ್ ಮೆಡಿಕಲ್ ಸೆಂಟರ್, ಉಡುಪಿ) ಮತ್ತು ಡಾ. ಶಕೀಲಾ ಸಚಿನ್ (ಮಂಜುನಾಥ್ ಐ ಹಾಸ್ಪಿಟಲ್, ಸುರತ್ಕಲ್/ಕುಂದಾಪುರ/ಉಡುಪಿ) ಉಪಸ್ಥಿತರಿದ್ದರು. ಪ್ರದರ್ಶನದಲ್ಲಿ […]

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭ

ಬಂಟಕಲ್: ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ನಿರಾಮಯ ಕಾಲೇಜ್ ಆಫ್ ನರ್ಸಿಂಗ್ ಮತ್ತು ನಿರಾಮಯ ಕಾಲೇಜ್ ಆಫ್ ಹೆಲೈಡ್ ಹೆಲ್ತ್ ಸೈನ್ಸ್ ಸಂಸ್ಥೆಗಳು ಜಂಟಿಯಾಗಿ ಕಾಲೇಜು ವಾರ್ಷಿಕೋತ್ಸವವು ದಿನಾಂಕ 13 ಮಾರ್ಚ್ 2026 ರಂದು ವಿಜೃಂಭಣೆಯಿಂದ ಜರಗಿತು. ಸಮಾರಂಭದಲ್ಲಿ ತೀರ್ಥಹಳ್ಳಿಯ ಬಾಳಗಾರು ಅಕ್ಷೋಭ್ಯ ಮಹಾಸಂಸ್ಥಾನ ಮಠದ ಕಿರಿಯ ಶ್ರೀಗಳಾದ ಶ್ರೀ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥ ಸ್ವಾಮೀಜಿಯವರ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀ ಮಧ್ವಚಾರ್ಯರು ಮತ್ತು ಶ್ರೀ ವಾದಿರಾಜರ ಸಾಧನೆಗಳು ಆಳವಾದ […]

ಉಡುಪಿ: ಮಾ.15ರಂದು ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾದಿಂದ ‘ಶಿವಾಜಿ ಸಂಗಮ’ ಕಾರ್ಯಕ್ರಮ

ಉಡುಪಿ: ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾದ ನೇತೃತ್ವದಲ್ಲಿ ಶಿವಾಜಿ ಸಂಗಮ ಕಾರ್ಯಕ್ರಮವನ್ನು ಮಾ.15ರಂದು ಸಂಜೆ 4.30ಕ್ಕೆ ಬಿಜೆಪಿ ಜಿಲ್ಲಾ ಕಚೇರಿಯ ಬಳಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ಅಧ್ಯಕ್ಷೆ ಸುಮಲತ ಹೇಳಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಸಹಿತ ಎಸ್.ಟಿ. ಸಮುದಾಯಕ್ಕೆ ಸರಕಾರದಿಂದ ದೊರಕಬಹುದಾದ ಸೌಲಭ್ಯಗಳನ್ನು ಪರಿಚಯಿಸುವ ಜೊತೆಗೆ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಜೀವನಾದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ […]

ಮುದರಂಗಡಿ: ಮಗು ಬಸ್ ಹತ್ತೋವರೆಗೂ ರಕ್ಷಕನಂತೆ ಜೊತೆಯಲ್ಲೇ ಇರೋ ಶ್ವಾನ!

ಉಡುಪಿ: ಪ್ರೀತಿಗೆ ಭಾಷೆಯ ಹಂಗಿಲ್ಲ ಎಂಬುವುದಕ್ಕೆ ಉಡುಪಿ ಜಿಲ್ಲೆಯ ಮುದರಂಗಡಿಯ ಈ ಘಟನೆ ಸಾಕ್ಷಿ. ಹೌದು, ಸಂತ ಫ್ರಾನ್ಸಿಸ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಯೊಬ್ಬಳು ಪ್ರತಿದಿನ ಬೆಳಿಗ್ಗೆ ಬಸ್ ಹತ್ತಲು ಹೋಗುವಾಗ ಮನೆಯ ಶ್ವಾನವು ಮಗುವಿನ ಜೊತೆಯಲ್ಲೇ ಬರುತ್ತದೆ. ಮಗು ಬಸ್ ಹತ್ತಿದ ಮೇಲೆ ಬಸ್ ಮೆಟ್ಟಿಲಿನ ಮೇಲೆ ನಿಂತು ಮಗು ಸೀಟಿನಲ್ಲಿ ಕುಳಿತಿರುವುದನ್ನು ಖಚಿತಪಡಿಸಿಕೊಂಡ ನಂತರವೇ ಈ ಶ್ವಾನವು ಅಲ್ಲಿಂದ ಮರಳುತ್ತದೆ. ಈ ಶ್ವಾನದ ಕಾಳಜಿ ಮತ್ತು ಪ್ರೀತಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಉಡುಪಿ ಜಿಲ್ಲೆಯ ಮೂವರು ರೌಡಿ ಶೀಟರ್‌ಗಳಿಗೆ ಗಡಿಪಾರು ಆದೇಶ

ಉಡುಪಿ: ಉಡುಪಿ ಜಿಲ್ಲೆಯ ಮೂವರು ರೌಡಿ ಶೀಟರ್‌ಗಳಿಗೆ ಗಡಿಪಾರು ಆದೇಶ ಜಾರಿಗೊಳಿಸಲಾಗಿದೆ. ಕಾಪು ತಾಲೂಕಿನ ನಡ್ಸಾಲು ಗ್ರಾಮದ ಜಬ್ಬಾರ್ ಹುಸೇನ್, ಹಿರಿಯಡಕ ಬೊಮ್ಮರಬೆಟ್ಟು ಗ್ರಾಮದ ಸಂದೇಶ್ ಹಾಗೂ ಹಿರಿಯಡಕ ದರ್ಖಾಸು ಪಾಪುಜೆ ನಿವಾಸಿ ಸುಶಾಂತ್ ಅವರ ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗಿದೆ.ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ವಿಶೇಷ ಕಾರ್ಯಾಂಗ ದಂಡಾಧಿಕಾರಿಗಳು ಮಾರ್ಚ್ 12ರಂದು ಗಡಿಪಾರು ಆದೇಶ ಹೊರಡಿಸಿದ್ದಾರೆ. ಜಬ್ಬಾರ್ ಹುಸೇನ್ ವಿರುದ್ಧ ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳು ಹಾಗೂ ಮಂಗಳೂರು ನಗರದಲ್ಲಿ ಒಟ್ಟು 16 […]