ಉಡುಪಿ: 20ನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆ

ಉಡುಪಿ: ತುಳು ರಂಗಭೂಮಿಯ ಬೆಳವಣಿಗೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಮಹನೀಯರಲ್ಲಿ ದಿ. ಕೆಮ್ಮೂರು ದೊಡ್ಡಣ್ಣ ಶೆಟ್ಟಿಯವರು ಅಗ್ರಗಣ್ಯರು, ಅವರ ನೆನಪಿನಲ್ಲಿ, ತುಳು ರಂಗಭೂಮಿಯನ್ನು ಜೀವಂತವಾಗಿರಿಸುವ,  ಸೃಜನಶೀಲ ಆಧುನಿಕ ರಂಗಪ್ರಯೋಗಗಳಿಗೆ ಅವಕಾಶ ಮಾಡಿಕೊಡುವ ಮತ್ತು ತುಳು ರಂಗಭೂಮಿಯು ಅನ್ಯಭಾಷಾ ರಂಗಭೂಮಿಗಳಿಗೆ ಸರಿಸಮನಾಗಿ ಬೆಳೆಸುವ ಎಂಬ ಉದ್ದೇಶದಿಂದ ಉಡುಪಿ ತುಳುಕೂಟವು ‘ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪಧೆಯನ್ನು 20ನೇ ವರ್ಷಗಳಿಂದ ನಡೆಸುತ್ತಿದೆ.

ಈ ಬಾರಿ 2022ರ ಜನವರಿ ತಿಂಗಳ 23ರಿಂದ ಕೆಮ್ತೂರು ತುಳು ನಾಟಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ದೇಶದ ಯಾವುದೇ ಪ್ರದೇಶದ ಯೋಗ್ಯ ತುಳು ಹವ್ಯಾಸಿ ನಾಟಕ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಸ್ಪರ್ಧೆ ಗರಿಷ್ಠ 5 ನಾಟಕಗಳನ್ನು ಆಯ್ಕೆ ಮಾಡಲಾಗುತ್ತದೆ. ಮೊದಲು 3 ವಿಜೇತ ತಂಡಗಳಿಗೆ ಕ್ರಮವಾಗಿ 20,000 ರು., 15,000 ರು. ಮತ್ತು 10,000 ರು. ನಗದು, ಅಲ್ಲದೇ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ  ಬಹುಮಾನ ಕೊಡಲಾಗುವುದು.

ಸ್ಪರ್ಧೆಗೆ ಆಯ್ಕೆಯಾದ ರಾಜ್ಯದೊಳಗಿನ ತಂಡಗಳಿಗೆ 5,000 ರೂ. ಹಾಗೂ ಹೊರರಾಜ್ಯದ ತಂಡಗಳಿಗೆ 10,000 ರೂ. ಭತ್ಯೆಯೊಂದಿಗೆ ಊಟೋಪಚಾರ ಮತ್ತು ಉತ್ತಮ ಸೌಕರ್ಯಗಳನ್ನು ಒದಗಿಸಲಾಗುವುದು.

 ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವ ಕ್ರಿಯಾಶೀಲ ತುಳು ಹವ್ಯಾಸಿ ರಂಗತಂಡಗಳು ಪ್ರವೇಶಪತ್ರ ಮತ್ತು ನಿಯಾವಳಿಗಳಿಗಾಗಿ ಬಿ. ಪ್ರಭಾಕರ ಭಂಡಾರಿ, ‘ಆಕೃತಿ’. 5-94ಎ, 76ನೇ ಬಡಗಬೆಟ್ಟು, ಬೈಲೂರು, ಉಡುಪಿ-576101 (ಮೊ.ಸಂ. 9880825626 ಅಥವಾ ಶ್ರೀಮತಿ ಯಶೋದ ಕೇಶವ, ಶ್ರೀ ಭಗವತಿಕೃಪ, ಬಡಾನಿಡಿಯೂರು, ಕದಿಕೆ ಉಡುಪಿ (ಮೊ.ಸಂ. 9036483463) ಇವರಿಗೆ ಬರೆಯಬೇಕು. ಪ್ರವೇಶಪತ್ರಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ ಡಿ.12 ಆಗಿದೆ ಎಂದು ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.