ಕೋಟಿಲಿಂಗೇಶ್ವರ ರಥೋತ್ಸವ: ಮದ್ಯ ಮಾರಾಟ ನಿಷೇಧ

ಉಡುಪಿ: ಕೋಟೇಶ್ವರ ಗ್ರಾಮದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ರಥೋತ್ಸವ ಕಾರ್ಯಕ್ರಮವು ನವೆಂಬರ್ 18 ರಿಂದ 20 ರ ವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಅಬಕಾರಿ ಕಾಯ್ದೆ 1965 ಕಲಂ 21 ರನ್ವಯ ಕುಂದಾಪುರ ಪೊಲೀಸ್ ಠಾಣಾ ಸರಹದ್ದಿನ ಕೋಟೇಶ್ವರ, ಹಂಗಳೂರು ಹಾಗೂ ಗೋಪಾಡಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್, ರೆಸ್ಟೋರೆಂಟ್ ಮತ್ತು ವೈನ್‌ಶಾಪ್‌ಗಳ ಮದ್ಯ ಮಾರಾಟವನ್ನು ನವೆಂಬರ್ 18ರ ಬೆಳಿಗ್ಗೆ 6 […]

ಮಲ್ಪೆಯ ಎರಡು ಬೋಟ್ ಮುಳುಗಡೆ

ಉಡುಪಿ: ಸಮುದ್ರದ ಅಲೆಗಳ ಹೊಡೆತಕ್ಕೆ ಮಲ್ಪೆಯ ಎರಡು ಮೀನುಗಾರಿಕಾ ಬೋಟ್ ಸಿಲುಕಿ‌ ಮುಳುಗಡೆಯಾದ ಘಟನೆ ಗೋವಾ ಪಣಜಿಯಲ್ಲಿ ಸಂಭವಿಸಿದ್ದು, ಅದರಲ್ಲಿದ್ದ ಏಳು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಮಲ್ಪೆಯ ಮಾತಾ ಜಟಗೇಶ್ವರ, ಪಲ್ಲಕ್ ಹೆಸರಿನ ಎರಡು ಬೋಟ್ ಗಳು ಮಲ್ಪೆಯಿಂದ ಗೋವಾದತ್ತ ಮೀನುಗಾರಿಕೆಗೆ ತೆರಳಿದ್ದು, ಈ ಸಂದರ್ಭದಲ್ಲಿ ಅಲೆಗಳ ಅಬ್ಬರಕ್ಕೆ ಬೋಟ್ ಸಿಲುಕಿದೆ. ಬೋಟಿನ ಇಂಜಿನ್ ದುರಸ್ತಿಗೊಂಡ ಪರಿಣಾಮ ಬೋಟ್ ಮುಳುಗಡೆಯಾಗಿದ್ದು, ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ. ಕಡಲ ಪ್ರಿಯ ಹೆಸರಿನ ಬೋಟ್ ಸಹ ಮುಳುಗಡೆ ಹಂತದಲ್ಲಿದ್ದು, ಅದನ್ನೂ […]

ಮನೆ-ಮನೆಗೆ ಭೇಟಿ ನೀಡಿ ಅರ್ಹ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡಿ: ಜಿಲ್ಲಾಧಿಕಾರಿ ಕೂರ್ಮಾರಾವ್

ಉಡುಪಿ: ಕೋವಿಡ್ ಸೋಂಕಿನ ನಿಯಂತ್ರಣಕ್ಕೆ ಕೋವಿಡ್ ನಿರೋಧಕ ಲಸಿಕೆಯೇ ಮದ್ದು, ಇದನ್ನು ಪ್ರತಿಯೊಬ್ಬರಿಗೂ ಮನೆ ಮನೆಗೆ ಭೇಟಿ ನೀಡಿ ನೀಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಲಸಿಕಾ ಕಾರ್ಯಪಡೆಯ ಸಮನ್ವಯ ಸಮಿತಿಯ ಅಧ್ಯಕ್ಷರಾದ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಮನೆ ಮನೆ ಭೇಟಿ ಕೋವಿಡ್ ಲಸಿಕಾ ಅಭಿಯಾನ ಅನುಷ್ಠಾನ ಕುರಿತ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 2,95,375 ಮನೆಗಳಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ […]

ಉಡುಪಿ: 20ನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆ

ಉಡುಪಿ: ತುಳು ರಂಗಭೂಮಿಯ ಬೆಳವಣಿಗೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಮಹನೀಯರಲ್ಲಿ ದಿ. ಕೆಮ್ಮೂರು ದೊಡ್ಡಣ್ಣ ಶೆಟ್ಟಿಯವರು ಅಗ್ರಗಣ್ಯರು, ಅವರ ನೆನಪಿನಲ್ಲಿ, ತುಳು ರಂಗಭೂಮಿಯನ್ನು ಜೀವಂತವಾಗಿರಿಸುವ,  ಸೃಜನಶೀಲ ಆಧುನಿಕ ರಂಗಪ್ರಯೋಗಗಳಿಗೆ ಅವಕಾಶ ಮಾಡಿಕೊಡುವ ಮತ್ತು ತುಳು ರಂಗಭೂಮಿಯು ಅನ್ಯಭಾಷಾ ರಂಗಭೂಮಿಗಳಿಗೆ ಸರಿಸಮನಾಗಿ ಬೆಳೆಸುವ ಎಂಬ ಉದ್ದೇಶದಿಂದ ಉಡುಪಿ ತುಳುಕೂಟವು ‘ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪಧೆಯನ್ನು 20ನೇ ವರ್ಷಗಳಿಂದ ನಡೆಸುತ್ತಿದೆ. ಈ ಬಾರಿ 2022ರ ಜನವರಿ ತಿಂಗಳ 23ರಿಂದ ಕೆಮ್ತೂರು ತುಳು ನಾಟಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ. […]

ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯಲ್ಲಿ ನಾಳೆಯಿಂದ (ನ.18) ಆರೋಗ್ಯ ಕಾರ್ಡ್ ಗಳ ನೋಂದಣಿ ಹಾಗೂ ನವೀಕರಣ

ಉಡುಪಿ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಪ್ರಧಾನ ಕಚೇರಿ ಪರ್ಕಳ ಹಾಗೂ ವಿವಿಧ ಶಾಖೆಗಳಲ್ಲಿ ಮಣಿಪಾಲ ಕೊಂಕಣಿ ಆರೋಗ್ಯ ಕಾರ್ಡ್ (ಮಣಿಪಾಲ ಸಿಗ್ನ ಪ್ರೊ ಹೆಲ್ತ್ ಕಾರ್ಡ್ ಗಳ ನೋಂದಣಿ ಮತ್ತು ನವೀಕರಣ ಕಾರ್ಯಕ್ರಮ ನ.17ರಿಂದ ಆರಂಭಗೊಂಡಿದೆ. ಸೊಸೈಟಿಯ ಪರ್ಕಳ ಪ್ರಧಾನ ಕಚೇರಿಯಲ್ಲಿ ನ.17ರಿಂದ 20ರ ವರೆಗೆ, ಬಂಟಕಲ್ಲು ಶಾಖೆಯಲ್ಲಿ ನ.18 ಮತ್ತು 19, ಕುಕ್ಕೆಹಳ್ಳಿ ಶಾಖೆಯಲ್ಲಿ ನ.23 ಮತ್ತು 24, ಹಿರಿಯಡಕ ಶಾಖೆಯಲ್ಲಿ ನ.25, ಮಣಿಪಾಲ ಶಾಖೆಯಲ್ಲಿ ನ.26 ಹಾಗೂ ಉಡುಪಿ ಶಾಖೆಯಲ್ಲಿ‌ […]