ಉಡುಪಿ: ಕವಿವೃಕ್ಷ ಬಳಗ ಉಡುಪಿ ಇದರ ಉದ್ಘಾಟನೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಪುಸ್ತಕ ಬಿಡುಗಡೆ, ಪದಗ್ರಹಣ, ಉಪನ್ಯಾಸ ಕಾರ್ಯಾಗಾರ ಮತ್ತು ಕವಿಗೋಷ್ಠಿ ಕಾರ್ಯಕ್ರಮಗಳು ಕಲ್ಸಂಕ- ಶ್ರೀಕೃಷ್ಣ ಪ್ರಜ್ಞಾ ಪ್ರತಿಷ್ಠಾನ ಸಭಾ ಭವನದಲ್ಲಿ ನಡೆಯಿತು.
ಕವಿವೃಕ್ಷ ಉಡುಪಿ ಜಿಲ್ಲಾ ಘಟಕದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಣೇಶ್ ಪ್ರಸಾದ್ ಪಾಂಡೇಲು ಅವರು ನೆರವೇರಿಸಿದರು.
ಕಾರ್ಯಕ್ರಮದದಲ್ಲಿ ಲೇಖಕಿ ಶೋಭಾ ಹರಿಪ್ರಸಾದ್ ಕುಕ್ಕಿಕಟ್ಟೆ ಅವರು ಬರೆದ ‘ಚಿಣ್ಣರ ಕನಸಿನ ಬಣ್ಣದ ಲೋಕ’ ಕವನ ಸಂಕಲನವನ್ನು ಗಣೇಶ್ ಪ್ರಸಾದ್ ಪಾಂಡೇಲು ಅವರು ಬಿಡುಗಡೆಗೊಳಿಸಿದರು. ಉಪನ್ಯಾಸ ಕಾರ್ಯಗಾರವು ವಿಶ್ವನಾಥ್ ಕೆ. ಉಪನ್ಯಾಸಕರು ಮೂಡಬಿದ್ರೆ ಪಾಲಿಟೆಕ್ನಿಕ್ ಅವರಿಂದ ನಡೆಯಿತು.
ಅನಂತರ ನಡೆದ ಕವಿಗೋಷ್ಠಿಯಲ್ಲಿ ಶೇಖರ ಬಿ. ದೇವಾಡಿಗ, ಸಂತೋಷ ಮುದ್ರಾಡಿ, ಜಗದೀಶ ರಾಮ್ ಶೆಟ್ಟಿಗಾರ್, ಮಂಜುನಾಥ ಮರವಂತೆ, ಶ್ಯಾಮ ಪ್ರಸಾದ್ ಭಟ್, ಪುಂಡಲೀಕ ನಾಯಕ್, ಮಂಜುನಾಥ ದೇವಾಡಿಗ, ಪುಷ್ಪ ಆರ್ ಮೇಸ್ತ, ಜಗದೀಶ ದೇವಾಡಿಗ, ದಿನೇಶ್ ಎನ್, ಗಣೇಶ್ ಪ್ರಸಾದ್ ಪಾಂಡೇಲು, ಶೋಭಾ ಹರಿಪ್ರಸಾದ್, ಚೇತನ್ ವಿನಾಯಕ, ರಾಮ ಮೂರ್ತಿ, ಉಮೇಶ ಆಚಾರ್ಯ ಮೊದಲಾದ ಹಿರಿ ಕಿರಿಯ ಕವಿಗಳು ಭಾಗವಹಿಸಿ, ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಶ್ಯಾಂ ಪ್ರಸಾದ್ ಭಟ್, ಲೇಖಕಿ ಶೋಭಾ ಹರಿಪ್ರಸಾದ್ ಕುಕ್ಕಿಕಟ್ಟೆ, ವಿಘ್ನೇಶ್ವರ ಉಡುಪ, ಗಣರಾಜ್ ಭಟ್ , ಸ.ಕಾ.ಇಂಜಿನಿಯರ್, ಮೆಸ್ಕಾಂ, ಉಡುಪಿ, ಲಯನ್ ಭಾಸ್ಕರ ಶೆಟ್ಟಿ, ರವೀಂದ್ರ ಹೆಚ್, ಲೇಖಕಿ ಪುಷ್ಪ ಮೇಸ್ತ ಶಿರೂರು ಹಾಗೂ ಕವಿವೃಕ್ಷ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕವಿ ಶೇಖರ ಬಿ ದೇವಾಡಿಗ ಸ್ವಾಗತಿಸಿ, ರಾಮಮೂರ್ತಿ ನಿರೂಪಿಸಿದರು. ಚೇತನ್ ವಿನಾಯಕ್ ವಂದಿಸಿದರು.