ಪಚ್ಚನಾಡಿ,‌ ಮಂದಾರ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

ಮಂಗಳೂರು: ತ್ಯಾಜ್ಯ ತುಂಬಿ ಕುಸಿತ ಉಂಟಾದ ಪಚ್ಚನಾಡಿ ಮತ್ತು ಮಂದಾರ ಪ್ರದೇಶಗಳಿಗೆ ಬುಧವಾರ ಜಿಲ್ಲಾಧಿಕಾರಿ ಸಿಂಧೂ‌ ರೂಪೇಶ್ ಭೇಟಿ ನೀಡಿದರು. ಮೊದಲು ಪಚ್ಚನಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಮಂದಾರಕ್ಕೆ ಭೇಟಿ ನೀಡಿದರು. ಅನಂತರ ಮಂದಾರ ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ನೀಡಿರುವ ಕುಲಶೇಖರ ಹೌಸಿಂಗ್ ಬೋಡ್೯ಗೆ ಭೇಟಿ ನೀಡಿ, ಸಂತ್ರಸ್ತರ ಅಹವಾಲು ಆಲಿಸಿದರು. ಸಂತ್ರಸ್ತರಿಗೆ ಜಿಲ್ಲಾಡಳಿತ ಎಲ್ಲ ರೀತಿಯ ನೆರವು ನೀಡಲಿದೆ ಎಂದು  ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು, ಇಲ್ಲಿನ ಸಮಸ್ಯೆ […]

ಉಡುಪಿ: ಮೂಳೆ ಸಾಂದ್ರತೆ ತಪಾಸಣಾ ಕಾರ್ಯಕ್ರಮ

ಉಡುಪಿ: ಜಯಂಟ್ಸ್ ಗ್ರೂಪ್ ಆಫ್ ಉಡುಪಿ ಮತ್ತು ಹಿರಿಯ ನಾಗರೀಕರ ಸಂಸ್ಥೆ ಉಡುಪಿ ವತಿಯಿಂದ ಅಜ್ಜರಕಾಡಿನ ಹಿರಿಯ ನಾಗರಿಕರ ಕಛೇರಿಯಲ್ಲಿ ಮೂಳೆ ಸಾಂದ್ರತಾ ತಪಸಣಾ ಕಾರ್ಯಕ್ರಮ ನಡೆಯಿತು. ಜಯಂಟ್ಸ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ್ ಅಮೀನ್ ಮತ್ತು ಹಿರಿಯ ನಾಗರಿಕ ವೇದಿಕೆಯ ಉಪಾಧ್ಯಕ್ಷ ವಿಶ್ವನಾಥ ಹೆಗ್ಡೆ ಮೂಲಕ  ಉದ್ಘಾಟಿಸಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಜಯಂಟ್ಸ್ ಯುನಿಟ್ ಡೈರೆಕ್ಟರ್ ರಮೇಶ್ ಪೂಜಾರಿ, ಜಯಂಟ್ಸ್ ಉಡುಪಿ ಅಧ್ಯಕ್ಷ  ಲಕ್ಷ್ಮೀಕಾಂತ್ ಬೆಸ್ಕೂರ್, ಉಪಾಧ್ಯಕ್ಷ ಇಕ್ಬಾಲ್ ಮನ್ನಾ, ಪೂರ್ವಾಧ್ಯಕ್ಷರುಗಳಾದ ಉಷಾ ರಮೇಶ್, ರಾಜೇಶ್ […]

ಉಡುಪಿ: ಕವಿವೃಕ್ಷ ಬಳಗ ಉದ್ಘಾಟನೆ; ಕವಿಗೋಷ್ಠಿ 

ಉಡುಪಿ: ಕವಿವೃಕ್ಷ ಬಳಗ ಉಡುಪಿ ಇದರ ಉದ್ಘಾಟನೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಪುಸ್ತಕ ಬಿಡುಗಡೆ, ಪದಗ್ರಹಣ, ಉಪನ್ಯಾಸ ಕಾರ್ಯಾಗಾರ ಮತ್ತು ಕವಿಗೋಷ್ಠಿ ಕಾರ್ಯಕ್ರಮಗಳು ಕಲ್ಸಂಕ- ಶ್ರೀಕೃಷ್ಣ ಪ್ರಜ್ಞಾ ಪ್ರತಿಷ್ಠಾನ ಸಭಾ ಭವನದಲ್ಲಿ  ನಡೆಯಿತು. ಕವಿವೃಕ್ಷ ಉಡುಪಿ ಜಿಲ್ಲಾ ಘಟಕದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಣೇಶ್ ಪ್ರಸಾದ್ ಪಾಂಡೇಲು ಅವರು ನೆರವೇರಿಸಿದರು. ಕಾರ್ಯಕ್ರಮದದಲ್ಲಿ ಲೇಖಕಿ ಶೋಭಾ ಹರಿಪ್ರಸಾದ್ ಕುಕ್ಕಿಕಟ್ಟೆ ಅವರು ಬರೆದ ‘ಚಿಣ್ಣರ ಕನಸಿನ ಬಣ್ಣದ ಲೋಕ’ ಕವನ ಸಂಕಲನವನ್ನು ಗಣೇಶ್ ಪ್ರಸಾದ್ […]

ಮಂಗಳೂರು: ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ನಳಿನ್

ಮಂಗಳೂರು: ಬಿಜೆಪಿ ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ.‌ ಸುಮ್ಮನೆ ಸುದ್ದಿ ಹರಿದಾಡುತ್ತಿದೆ ಅಷ್ಟೇ.‌ ಮೊನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಚಿವ ಆರ್. ಅಶೋಕ್ ಅವರು ಅನಾರೋಗ್ಯದ ಕಾರಣದಿಂದ ಬರಲಿಲ್ಲ.‌ ಅವರು ನಮ್ಮ ಜೊತೆಗೆ ಇದ್ದಾರೆ ಎಂದು‌ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ನಳಿನ್ ಒಂದು ಸಾವಿರ ಕೋಟಿ ತಂದ್ರೆ ಅದು ಸುದ್ದಿಯೇ ಆಗುವುದಿಲ್ಲ. ಸುದ್ದಿ ಆಗುವುದು ನೆಗೆಟಿವ್ ಅಂಶ ಇದ್ದಾಗ ಮಾತ್ರ.‌ ರಾಜಕೀಯದಲ್ಲಿ ಇದೆಲ್ಲ […]

ವಿಟ್ಲ: ಗರ್ಭಿಣಿ ಸಹೊದ್ಯೋಗಿಗೆ ಠಾಣೆಯಲ್ಲೇ ಸೀಮಂತ ಮಾಡಿದ ಸಿಬಂಧಿ

ಮಂಗಳೂರು: ಗರ್ಭಿಣಿಯರಿಗೆ ಸೀಮಂತ ಮಾಡಿ ಗಂಡನ‌ ಮನೆಯಿಂದ ತಾಯಿ ಮನೆಗೆ ಕಳುಹಿಸಿ ಕೊಡುವುದು ಸರ್ವೇ ಸಾಮಾನ್ಯ. ಆದರೆ ಪೊಲೀಸ್ ಠಾಣೆಯಲ್ಲಿ ಗರ್ಭಿಣಿ ಸಿಬ್ಬಂದಿಗೆ ತಮ್ಮ ಸಹೋದ್ಯೋಗಿಗಳು ಸೀಮಂತ ಮಾಡಿದ ಅಪರೂಪದ ಘಟನೆ  ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆಯಲ್ಲಿ ನಡೆದಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಪುತ್ತೂರು ನಿವಾಸಿ ತುಂಬು ಗರ್ಭಿಣಿ ಮಲ್ಲಿಕಾ ಅವರನ್ನು ವಿಟ್ಲ ಠಾಣಾ ಎಸ್ ಐ ಮತ್ತು ಠಾಣಾ ಸಿಬ್ಬಂದಿಗಳು ಜತೆ […]