ಉಡುಪಿ: ಕಂಬಳ ಸಾಧಕ ಅಡ್ವೆ ಕಂಕಣ ಗುತ್ತು ಹರೀಶ್ ಶೆಟ್ಟಿ (62)ಅವರು ಆ. 9ರಂದು ನಿಧನ ಹೊಂದಿದರು. ಅವರು ಕಳೆದ ಕೆಲ ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರು.
ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕಂಬಳ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಭಾಗವಹಿಸುತ್ತಿದ್ದ ಅವರು ಹಗ್ಗ, ನೇಗಿಲು, ಕನೆ ಹಲಗೆ ವಿಭಾಗದಲ್ಲಿ ಕೋಣಗಳನ್ನು ಸ್ಪರ್ಧೆಗಿಳಿಸಿದ್ದರು. ಅಲ್ಲದೆ ಈ ವಿಭಾಗದಲ್ಲಿ ಬಹುಮಾನಗಳನ್ನು ಪಡೆದು ಕಂಬಳ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದರು.
ಹೋಟೆಲ್ ಉದ್ಯಮಿಯಾಗಿದ್ದ ಅವರು ಅಡ್ವೆ ಕಂಬಳದ ಪದಾಧಿಕಾರಿಯಾಗಿದ್ದರು. ಕಂಬಳ ಕ್ಷೇತ್ರದ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುವ ಹಾಗೂ ಅತ್ಯಂತ ಪ್ರೀತಿಯ ನಡವಳಿಕೆಯ ವ್ಯಕ್ತಿಯಾಗಿದ್ದರು.
ಅವರ ಅಗಲಿಕೆಗೆ ಕಂಬಳ ಕ್ಷೇತ್ರದ ಹಲವು ಮಂದಿ ಸಂತಾಪ ಸೂಚಿಸಿದ್ದಾರೆ.