ಉಡುಪಿ: ಸಂಚಲನ ಸಂಸ್ಥೆ ಹಾಗೂ ಉನ್ನತಿ ಕಾರಿಯರ್ ಅಕಾಡೆಮಿ ಸಹಯೋಗದಲ್ಲಿ ಜಿಲ್ಲಾಮಟ್ಟದ ಉದ್ಯೋಗ ಮೇಳ ಉಡುಪಿ ಅಜ್ಜರಕಾಡಿನ ಡಾ. ಜಿ. ಶಂಕರ್ ಮಜಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನವರಿ 12 ಹಾಗೂ 13 ರಂದು ನಡೆಯಲಿದೆ ಎಂದು ಸಂಚಲನ ಸಂಸ್ಥೆ ಅಧ್ಯಕ್ಷ ಪ್ರೇಮ್ ಪ್ರಸಾದ್ ಶೆಟ್ಟಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬೃಹತ್ ಉದ್ಯೋಗ ಮೇಳದಲ್ಲಿ ಸ್ಥಳೀಯ ಹಾಗೂ ಬೆಂಗಳೂರಿನ ಪ್ರತಿಷ್ಠಿತ 150 ಕಂಪೆನಿಗಳು ಭಾಗವಹಿಸಲಿವೆ. ಸುಮಾರು 5 ಸಾವಿರಕ್ಕೂ ಹೆಚ್ಚಿನ ಉದ್ಯೋಗಾವಕಾಶವನ್ನು ಸೃಷ್ಟಿಸುವ ಗುರಿ ಹೊಂದಲಾಗಿದ್ದು, ಶೇ. 50ರಷ್ಟು ಉದ್ಯೋಗವಕಾಶವನ್ನು ಸ್ಥಳೀಯವಾಗಿ ಒದಗಿಸುವ ಚಿಂತನೆ ಇದೆ ಎಂದರು.
ಉದ್ಯೋಗ ಮೇಳದಲ್ಲಿ ಜಿಲ್ಲೆಯ 18ರಿಂದ 40 ವಯೋಮಿತಿಯ ಎಸ್.ಎಸ್.ಎಲ್.ಸಿ , ಪಿಯು.ಸಿ , ಐ.ಟಿ.ಐ, ಡಿಪ್ಲೊಮಾ, ಪದವೀಧರ, ಸ್ನಾತಕೋತ್ತರ, ಎಂಜಿನಿಯರ್, ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸ ಬಹದಾಗಿದೆ. ಅರ್ಜಿಯನ್ನು ಆನ್ಲೈನ್ www.nammadeshprem. orgಮೂಲಕ ನೋಂದಣಿ ಮಾಡಲು ಜ.5 ಕೊನೆಯ ದಿನವಾಗಿದೆ, ಜನವರಿ 5 ಹಾಗೂ 6ರಂದು ನೊಂದಾಣಿಗೊಂಡ ಅಭ್ಯರ್ಥಿಗಳಿಗೆ ಸಂದರ್ಶನದ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದರು.
ಸುಬ್ರಹ್ಮಣ್ಯ ಕಿಣಿ, ಅಕ್ಷಯ ಶೆಟ್ಟಿ, ಪ್ರಮೋದ್, ವಿಜಯ ಉಪಸ್ಥಿತರಿದ್ದರು.