ಉಡುಪಿ: ಕೃಷಿಕರು ತಮ್ಮ ಜಮೀನನ್ನು ಪಾಳು ಬಿಡಬಾರದು, ಸರಕಾರ ನೀಡುತ್ತಿರುವ ಹಲವಾರು ಕೃಷಿ ಸೌಲಭ್ಯಗಳನ್ನು ತಿಳಿದುಕೊಳ್ಳಬೇಕು. ಜಿಲ್ಲೆಯಲ್ಲಿ ಸರಕಾರಿ ಯೋಜನೆಗಳ ವಿಫಲತೆಗೆ ಅಧಿಕಾರಿಗಳು, ಜನಪ್ರತಿನಿಧಿಳು ಮಾತ್ರವಲ್ಲದೇ ಜನರಲ್ಲಿರುವ ಮಾಹಿತಿ ಕೊರತೆ ಕೂಡಾ ಕಾರಣವಾಗಿದೆ ಎಂದು ಸಾಧನಶೀಲ ಕೃಷಿಕ ರಾಷ್ಟ್ರ ಪ್ರಶಸ್ತಿ ವಿಜೇತ ಕೃಷಿಕ ಕುದಿ ಶ್ರೀನಿವಾಸ ಭಟ್ ಹೇಳಿದರು.
ಅವರು ಶನಿವಾರ ಉಡುಪಿ ಜಿಲ್ಲಾ ಕೃಷಿಕ ಸಂಘ ಉಡುಪಿ ರೆಸಿಡೆನ್ಸಿ ಹೋಟೆಲ್
ರೂಫ್ ಟಾಪ್ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರಕಾರದ ಯೋಜನೆಗಳನ್ನು ಬಳಸಿಕೊಂಡು ಸುಲಭ ಕೃಷಿ ವಿಧಾನಗಳನ್ನು ಅನುಸರಿಸಿ ಕೃಷಿ ಮಾಡಿದರೆ ನಷ್ಟವಾಗದು ಎಂದರು.
ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆ ವಹಿಸಿ
ಮಾತನಾಡಿ, ಸಂಘಟನೆಯ ಮಹತ್ವದ ಬಗ್ಗೆ ತಿಳಿಸಿದರು.
ಕರಂಬಳ್ಳಿ ಕೆ. ಮಂಜುನಾಥ ನಾಯಕ್ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಪ್ರಸ್ತಾವನೆಗೈದು, ಜಾತಿ-ಧರ್ಮಗಳು ನಮ್ಮ ಮನೆ ಮಂದಿರಗಳಲ್ಲಿ ಮಾತ್ರ ಇರಬೇಕು. ಸಾರ್ವಜನಿಕವಾಗಿ ನಾವೆಲ್ಲ ಒಂದೇ ಆಗಿರಬೇಕು. ಎಂದಾದಾಗ ಮಾತ್ರ ಸಂಘಟನೆ, ಸಮಾಜ, ದೇಶ ಬೆಳೆಯುತ್ತದೆ ಎಂದರು.
ತೋಟಗಾರಿಕೆ ಇಲಾಖೆ ಅಧಿಕಾರಿ ದೀಪಾ ಎಸ್. ತೋಟಗಾರಿಕಾ ಇಲಾಖೆ ಸೌಲಭ್ಯಗಳ ಕುರಿತು ವಿಸ್ತೃತ ಮಾಹಿತಿ ನೀಡಿದರು.
ಕೃಷಿಕ ಸಂಘದ ಉಪಾಧ್ಯಕ್ಷ ದಿನೇಶ್ ಶೆಟ್ಟಿ ಹೆರ್ಗ, ಮಾಜಿ ಉಪಾಧ್ಯಕ್ಷ ಭಾಸ್ಕರ ಶೆಟ್ಟಿ ಉಚ್ಚಿಲ, ಪಾಂಡುರಂಗ ನಾಯಕ್, ಹಿರಿಯಡ್ಕ, ಎ.ಪಿ.ಯಂ.ಸಿ. ಅಧ್ಯಕ್ಷ ಶ್ಯಾಮ್ ಪ್ರಸಾದ್ ಭಟ್ ಪೇತ್ರಿ ಮೊದಲಾದವರು ಉಪಸ್ಥಿತರಿದ್ದರು. ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ
ನಿರ್ವಹಿಸಿ, ವಂದಿಸಿದರು.