ಉಡುಪಿ: ಜೆಡಿಎಸ್ ಪಕ್ಷದ ಜಿಲ್ಲಾಮಟ್ಟದ ಪಕ್ಷ ಸಂಘಟನೆ ಸಭೆ ಮತ್ತು ಸದಸ್ಯತ್ವ ಅಭಿಯಾನ ಹಾಗೂ ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಪದಾಧಿಕಾರಿಗಳ ಪದಗ್ರಹಣ ಸಭೆ ಉಡುಪಿ ಸ್ವದೇಶಿ ಹೇರಿಟೇಜ್ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೇಶ್ ವಿ ಶೆಟ್ಟಿ ಅವರು, ಜಿಲ್ಲೆಯಲ್ಲಿ ಪಕ್ಷವನ್ನು ಕಾಂಗ್ರೆಸ್-ಬಿಜೆಪಿಗೆ ಸರಿಸಮಾನವಾಗಿ ಬೆಳೆಸಲು ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷರು ಆಗಿರುವ ಉಡುಪಿ ಜಿಲ್ಲಾ ಉಸ್ತುವಾರಿ ಸುಧಾಕರ್ ಶೆಟ್ಟಿ ಮೈಸೂರು ಸಮಾರಂಭವನ್ನು ಉದ್ಘಾಟಿಸಿದರು.
ಈ ಸಂದರ್ಭ ಪಕ್ಷದ ನಾಯಕರಾಗಿರುವ ನಿವೃತ್ತ ಅಧ್ಯಾಪಕ ರಮೇಶ್ ಮಾಸ್ಟರ್ ಅವರನ್ನು ಸನ್ಮಾನಿಸಲಾಯಿತು.
ಜೆಡಿಎಸ್ ಮುಖಂಡರಾದ ವಾಸುದೇವರಾವ್, ಗಂಗಾಧರ ಬಿರ್ತಿ , ಚಂದ್ರಹಾಸ ಎರ್ಮಾಳು, ಉದಯ ಹೆಗಡೆ, ಸಬ್ಲಾಡಿ ಮಂಜಯ್ಯ ಶೆಟ್ಟಿ, ದಕ್ಷಿತ್ ಶೆಟ್ಟಿ, ಮನ್ಸೂರ್ ಇಬ್ರಾಹಿಂ, ಬಾಲಕೃಷ್ಣ ಆಚಾರ್ಯ, ಶ್ರೀಕಾಂತ್ ಕುಚ್ಚೂರು, ಇಕ್ಬಾಲ್ ಆತ್ರಾಡಿ, ಕಿಶೋರ್ ಬಳ್ಳಾಲ್, ದಿಲ್ಶಾದ್ ಮತ್ತಿತರರು ಉಪಸ್ಥಿತರಿದ್ದರು.
ಮಮತಾ ಪ್ರಾರ್ಥಿಸಿದರು. ಜಯರಾಮ ಆಚಾರ್ಯ ಸ್ವಾಗತಿಸಿದರು. ಹುಸೇನ್ ಹೈಕಾಡಿ ವಂದಿಸಿದರು.