ಉಡುಪಿ: ಸ್ವಾಮಿ ವಿವೇಕಾನಂದರ ಜನ್ಮವರ್ಷದ ಪ್ರಯುಕ್ತ ಕುರ್ಮಾ ಬಳಗ ವತಿಯಿಂದ ‘ಜಯೋಸ್ತುತೇ’ ಸಾರ್ವಕರ್ ಸಾಹಿತ್ಯ ಸಂಭ್ರಮ
ಕಾರ್ಯಕ್ರಮವು ಉಡುಪಿಯ ಪುರಭವನದಲ್ಲಿ ಜ.12ರಂದು ಮಧ್ಯಾಹ್ನ 3ಗಂಟೆಗೆ ನಡೆಯಲಿದೆ.
ಈ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಕೂರ್ಮ ಬಳಗದ ಸಂಚಾಲಕ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾಹಿತಿ ನೀಡಿದರು.
ಸ್ವಾತಂತ್ರ್ಯ ಸೇನಾನಿ ವಿನಾಯಕ ದಾಮೋದರ ಸಾರ್ವಕರ್ ಅವರ ಬದುಕು ಬರಹಗಳನ್ನು ಯುವಜನತೆಗೆ ತೆರೆದಿಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ನಡೆಯುವ ವಿಚಾರಗೋಷ್ಠಿಯಲ್ಲಿ ಮೊದಲಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಸಾರ್ವಕರ್ ಒಂದು ಸಮರ್ಪಿತ ಬದುಕು ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ. ಆ ಬಳಿಕ ಖ್ಯಾತ ಸಾಹಿತ್ಯ ವಿಮರ್ಶಕ ಸಂದೀಪ್ ಬಾಲಕೃಷ್ಣನ್ ಅವರು ಸಾರ್ವಕರ್ ಮತ್ತು ಸಾಹಿತ್ಯ ಬಗ್ಗೆ ವಿಚಾರ ಮಂಡಿಸುವರು. ಸಮಾರೋಪ ಸಮಾರಂಭದಲ್ಲಿ ವೀರ ಸಾವರ್ಕರ್ ಅವರ ಮೊಮ್ಮಗ, ಮೃತ್ಯುಂಜಯ ಪ್ರಕಾಶನದ ಮುಖ್ಯಸ್ಥ ಸಾತ್ಯಕಿ ಸಾವರ್ಕರ್ ಪ್ರಧಾನ ಭಾಷಣ ಮಾಡುವರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಾವರ್ಕರ್ ಅವರ ಕೃತಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ಜೊತೆಗೆ ಸಾವರ್ಕರವರ ಸಾಹಿತ್ಯಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಸಂವೇದನಾ ಫೌಂಡೇಶನ್ ನ ಪ್ರಕಾಶ್ ಮಲ್ಪೆ, ಕೂರ್ಮ ಬಳಗದ ಸೂರಜ್ ಕಿದಿಯೂರು, ಶಶಿಕಾಂತ್ ಶೆಟ್ಟಿ ಇದ್ದರು.
.












