ಉಡುಪಿ: ಪೂರ್ಣಪ್ರಜ್ಞ ಕಾಲೇಜಿನ ರೇಂಜರ್ಸ್- ರೋವರ್ಸ್ ಘಟಕದ ಚಟುವಟಿಕೆಗಳ ಉದ್ಘಾಟನೆ

ಉಡುಪಿ: ಇಲ್ಲಿನ ಪೂರ್ಣಪ್ರಜ್ಞ ಕಾಲೇಜಿನ ರೇಂಜರ್ಸ್ ಮತ್ತು ರೋವರ್ಸ್ ಘಟಕದ 2021-22 ಸಾಲಿನ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಉಡುಪಿಯ ಯುವ ರೋವರ್ ಸ್ಕೌಟ್ ಲೀಡರ್ ವಿತೇಶ್ ಕಾಂಚನ್ ಮಾತನಾಡಿ, ವಿದ್ಯಾರ್ಥಿಗಳು ಸ್ಕೌಟ್ಸ್ ಮೂಲ ಧ್ಯೇಯವನ್ನು ಅರಿತುಕೊಳ್ಳುವುದರ ಜತೆಗೆ ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು. ಆ ಮೂಲಕ ದೇಶದ ಏಳಿಗೆಗಾಗಿ ಕರ್ತವ್ಯ ಮಾಡಬೇಕು ಎಂದು ಹೇಳಿದರು.

ಕಾಲೇಜಿನ ಉಪಪ್ರಾಮ್ಶುಪಾಲ ಡಾ. ಪ್ರಕಾಶ್ ರಾವ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಆಂತರಿಕ ಗುಣಮಟ್ಟ ಕಾತರಿ ಘಟಕದ ಸಂಯೋಜಕರಾದ ಡಾ. ವಿನಯ್, ರೇಂಜರ್ ನಾಯಕಿ ಜ್ಯೋತಿ ಆಚಾರ್ಯ, ಉಪ ನಾಯಕಿ ಪ್ರತಿಭಾ ಭಟ್, ರೋವರ್ ನಾಯಕ ಡಾ. ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ರೇಂಜರ್ ಕವನ ಉಲ್ಲಾಸ್ ಸ್ವಾಗತಿಸಿ, ರೋವರ್ ರಚನ್ ವಂದಿಸಿದರು. ರೇಂಜರ್ ಲಾಸ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.