ಉಡುಪಿ: ನಾಳೆ (ಅ.29) ಮಿಷನ್ ಆಸ್ಪತ್ರೆಯ ಕರುಣಾಲಯ ಘಟಕ ಉದ್ಘಾಟನೆ

ಉಡುಪಿ: ಉಡುಪಿ ಲೊಂಬಾರ್ಡ್ ಮೆಮೊರಿಯಲ್ (ಮಿಶನ್) ಆಸ್ಪತ್ರೆಯ ವತಿಯಿಂದ ಕೊರಂಗ್ರಪಾಡಿ ಬೈಲೂರಿನಲ್ಲಿ ಸ್ಥಾಪಿಸಲಾದ ನೂತನ ಜೆರಿಯಟ್ರಿಕ್ ನರ್ಸಿಂಗ್ ಕೇರ್ ಘಟಕ “ಕರುಣಾಲಯ” ಇದರ ಉದ್ಘಾಟನೆ ನಾಳೆ (ಅ.29) ಸಂಜೆ 4 ಗಂಟೆಗೆ ನಡೆಯಲಿದೆ.

ಸಿಎಸ್ ಐ ಕೆಎಸ್ ಡಿ ಬಿಷಪ್ ಮೋಹನ್ ಮನೋರಾಜ್ ಅವರು ಕರುಣಾಲಯ ಘಟಕವನ್ನು ಉದ್ಘಾಟಿಸುವರು. ಉಡುಪಿ ಶಾಸಕ ಕೆ. ರಘುಪತಿ ಭಟ್, ಉಡುಪಿ‌ ಡಿಎಚ್ ಒ ಡಾ. ನಾಗಭೂಷಣ್ ಉಡುಪ, ಕೆಎಸ್ ಡಿ ಉಡುಪಿ ವಲಯ ಮುಖ್ಯಸ್ಥ ಐವನ್ ಡಿ. ಸೋನ್ಸ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ನಗರಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ಬೈಲೂರು ವಾರ್ಡ್ ನಗರಸಭಾ ಸದಸ್ಯ ವಿಜಯ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಅವರು ಅಧ್ಯಕ್ಷತೆ ವಹಿಸುವರು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.