udupixpress
Home Trending ಹೊರ ಜಿಲ್ಲೆಗಳ ಪಾಸ್ ಗಳಿಗೆ ಮಾನ್ಯತೆ ನೀಡುವುದಿಲ್ಲ: ಜಿಲ್ಲಾಧಿಕಾರಿ ಜಗದೀಶ್

ಹೊರ ಜಿಲ್ಲೆಗಳ ಪಾಸ್ ಗಳಿಗೆ ಮಾನ್ಯತೆ ನೀಡುವುದಿಲ್ಲ: ಜಿಲ್ಲಾಧಿಕಾರಿ ಜಗದೀಶ್

ಉಡುಪಿ ಏ.12: ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಕೊರೋನಾ ನಿಯಂತ್ರಣದಲ್ಲಿದ್ದು, ಜಿಲ್ಲೆಯೊಳಗೆ ಕೊರೋನಾ ಕಂಡು ಬರುವ ಸಾಧ್ಯತೆ ಅತ್ಯಂತ ಕಡಿಮೆ ಇದ್ದು, ಹೊರ ಜಿಲ್ಲೆಯಿಂದ ಬರುವವರ ಮೂಲಕ ಮಾತ್ರ ಕಂಡು ಬರುವ ಸಾದ್ಯತೆಗಳಿದೆ. ಸಾರ್ವಜನಿಕರು ಜಿಲ್ಲೆಯೊಳಗೆ ಪ್ರವೇಶಿಸಲು ಹೊರ ಜಿಲ್ಲೆಗಳಿಂದ ಪಾಸ್ ಪಡೆದು ಬರುತ್ತಿದ್ದು ಗಮನಕ್ಕೆ ಬಂದಿದ್ದು,  ಜಿಲ್ಲೆಯ ನಾಗರೀಕರ ಆರೋಗ್ಯದ ದೃಷ್ಠಿಯಿಂದ, ಹೊರ ಜಿಲ್ಲೆಗಳಿಂದ ಪಾಸ್ ಪಡೆದು ಜಿಲ್ಲೆಯೊಳಗೆ ಪ್ರವೇಶಿಸುವವರಿಗೆ ಯಾವುದೇ ಕಾರಣಕ್ಕೂ ಚೆಕ್‍ಪೋಸ್ಟ್ ಗಳಲ್ಲಿ ಅನುಮತಿ ನೀಡುವುದಿಲ್ಲ ಹಾಗೂ ಅಂತಹ ಪಾಸ್ ಗಳನ್ನು ಮಾನ್ಯ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ಯಾರಾದರೂ ಅಕ್ರಮವಾಗಿ ಜಿಲ್ಲೆಯನ್ನು ಪ್ರವೇಶ ಮಾಡಿದಲ್ಲಿ, ಅವರನ್ನು 14 ದಿನಗಳ ಸರ್ಕಾರಿ ಕ್ವಾರಂಟೈನ್ ಗೆ ಒಳಪಡಿಸುವುದಾಗಿ ಎಚ್ಚರಿಸಿರುವ ಜಿಲ್ಲಾಧಿಕಾರಿ ಜಿ.ಜಗದೀಶ್, ಮತ್ತು ಅತ್ಯಂತ ಗಂಭೀರ ಮತ್ತು ಮತ್ತು ವೈದ್ಯಕೀಯ ಚಿಕಿತ್ಸೆಗೆ ಮಾತ್ರ  ಜಿಲ್ಲೆಯ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

error: Content is protected !!