ಉಡುಪಿ: ಎರಡನೆ ಹಂತದ ಗ್ರಾಪಂ ಚುನಾವಣೆ; ಬಿರುಸಿನ ಮತದಾನ

ಉಡುಪಿ: ಜಿಲ್ಲೆಯ ಕಾಪು, ಕಾರ್ಕಳ ಹಾಗೂ ಕುಂದಾಪುರ ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳಿಗೆ ಇಂದು ಎರಡನೆ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಜನರು ಉತ್ಸಾಹದಿಂದ ಭಾಗವಹಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಬೆಳಿಗ್ಗೆ 9 ಗಂಟೆಯ ವೇಳೆ ಜಿಲ್ಲೆ‌ಯಲ್ಲಿ ಒಟ್ಟು ಶೇ. 12.48 ಮತದಾನ ಆಗಿದೆ. ಕಾಪು ತಾಲೂಕಿನಲ್ಲಿ ಶೇ.12.25, ಕಾರ್ಕಳ ತಾಲೂಕಿನಲ್ಲಿ ಶೇ.13.77 ಹಾಗೂ ಕುಂದಾಪುರ ತಾಲೂಕಿನಲ್ಲಿ ಶೇ.12.10 ಮತದಾನ ನಡೆದಿದೆ.

ಬೆಳಿಗ್ಗೆ 11 ಗಂಟೆಗೆ ಜಿಲ್ಲೆಯಲ್ಲಿ ಒಟ್ಟು ಸರಾಸರಿ ಶೇ. 31.23 ಮತದಾನ ಆಗಿದೆ. ಕಾಪುವಿನಲ್ಲಿ ಶೇ. 30.42, ಕಾರ್ಕಳದಲ್ಲಿ ಶೇ.33.37, ಕುಂದಾಪುರದಲ್ಲಿ ಶೇ. 30.17 ಮತದಾನ ನಡೆದಿದೆ.