ಮಣಿಪಾಲ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ, ಉಡುಪಿ ಡಾ. ಟಿಎಂಎ ಪೈ ಆಸ್ಪತ್ರೆ ಹಾಗೂ ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಸದ್ಯ ಕೋವಿಡ್ ಲಸಿಕೆ ಲಭ್ಯವಿಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.
ಜೂನ್ 1ರ ನಂತರ ಲಸಿಕೆ ದೊರೆಯುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಮೇಲಿನ ಮೂರು ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯತೆ ಬಗ್ಗೆ ತಿಳಿದುಕೊಂಡು ಆಸ್ಪತ್ರೆಗೆ ಬರುವುದು ಸೂಕ್ತ. ನಾವು ನೇರವಾಗಿ ಕಂಪನಿಯಿಂದ ಲಸಿಕೆ ಖರೀದಿಯ ಪ್ರಯತ್ನದಲ್ಲಿದ್ದೇವೆ. ಲಸಿಕೆ ಲಭ್ಯತೆ ಕುರಿತು ಸಾರ್ವಜನಿಕರಿಂದ ತುಂಬಾ ಕರೆಗಳು ಬರುತ್ತಿವೆ. ಒಮ್ಮೆ ಲಭ್ಯವಾದ ನಂತರ ಸಾರ್ವಜನಿಕರಿಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿವೆ.
ಲಸಿಕೆ ಲಭ್ಯತೆಯನ್ನು ತಿಳಿದುಕೊಂಡು ಆಸ್ಪತ್ರೆಗೆ ಬನ್ನಿ ಎಂದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಡಾ. ಟಿಎಂಎಪೈ ಆಸ್ಪತ್ರೆಯ ಡಾ. ಶಶಿಕಿರಣ್ ಉಮಾಕಾಂತ್, ಡಾ. ಟಿಎಂಎ ಪೈ ರೋಟರಿ ಆಸ್ಪತೆಯ ಡಾ. ಕೀರ್ತಿನಾಥ ಬಲ್ಲಾಳ ಮನವಿ ಮಾಡಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು:
ಕಸ್ತೂರ್ಬಾ ಆಸ್ಪತೆ, ಮಣಿಪಾಲ: 0820 2922761
ಡಾ. ಟಿ ಎಂ ಎ ಪೈ ಆಸ್ಪತೆ, ಉಡುಪಿ : 0820 2942126
ಡಾ. ಟಿ ಎಂ ಎ ರೋಟರಿ ಪೈ ಆಸ್ಪತೆ, ಕಾರ್ಕಳ : 0825 8230583