ಉಡುಪಿ: ಜಿಲ್ಲಾಡಳಿತ, ರೋಟರಿ ಉಡುಪಿ ರಾಯಲ್, ಮಣಿಪಾಲ ಹಿಲ್ಸ್, ರೋಟರ್ಯಾಕ್ಟ್ ಮಣಿಪಾಲ, ಸಹಕಾರ ಭಾರತಿ, ಲಯನ್ಸ್ ಜಿಲ್ಲೆ 317ಸಿ, ಲಿಯೋ ಜಿಲ್ಲೆ 317ಸಿ ಹಾಗೂ ಇತರ ಸಾರ್ವಜನಿಕ ಸಂಸ್ಥೆಗಳ ಸಹಕಾರದೊಂದಿಗೆ ನೆರೆ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಅವಶ್ಯಕ ವಸ್ತುಗಳ ಸಂಗ್ರಹ ರಸ್ತೆ ಅಭಿಯಾನಕ್ಕೆ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಂಗಳವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಾಯಲ್ ಅಧ್ಯಕ್ಷ ಬಿ.ಕೆ. ಯಶವಂತ, ಕಾರ್ಯಕ್ರಮ ಸಂಘಟಕ ರತ್ನಾಕರ್ ಇಂದ್ರಾಳಿ, ಬಾಲಕೃಷ್ಣ ಮದ್ದೋಡಿ, ಸಹಕಾರ ಭಾರತಿ ಅಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ, ಲಯನ್ಸ್ ಗವರ್ನರ್ ವಿ.ಜಿ. ಶೆಟ್ಟಿ, ಲಿಯೋ ಜಿಲ್ಲಾ ಸಂಯೋಜಕ ಮಹಮ್ಮದ್ ಮೌಲಾ, ಫೌಜನಾ ಅಕ್ರಮ್, ಅಶ್ವಥ್ ಆಚಾರ್ಯ, ಎಸ್.ಟಿ. ಕರ್ಕೇರ, ಹೃಷಿಕೇಶ್ ಹೆಗ್ಡೆ, ಚಂದ್ರಶೇಖರ್ ರಾವ್, ದಿವಾಕರ ಶೆಟ್ಟಿ, ಸಂತೋಷ್ ಮಥಾಯಸ್, ಸತೀಶ್ ಜತ್ತನ್, ಬಾಲಗಂಗಾಧರ ರಾವ್, ಮಂಜುನಾಥ್ ಮಣಿಪಾಲ, ನಿತ್ಯಾನಂದ ಒಳಕಾಡು ಇದ್ದರು.












