ಉಡುಪಿ: ಪೇಜಾವರ ಮಠದಲ್ಲಿ ಅಗ್ನಿ ಅವಘಡ

ಉಡುಪಿ: ಇಲ್ಲಿನ ಪೇಜಾವರ ಮಠದಲ್ಲಿ ಎಸಿಯ ವಿದ್ಯುತ್ ಶಾಕ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿದ್ದು, ಯಾವುದೇ ಹಾನಿ ಆಗಿಲ್ಲ ಎಂದು ತಿಳಿದುಬಂದಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಉಡುಪಿ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಠದಲ್ಲಿ ಸ್ವಾಮಿಜಿಗಳು ಇರಲಿಲ್ಲ. ಅಲ್ಲದೆ, ಅವಘಡದಿಂದ ಮಠದ ಪೀಠೋಪಕರಣಗಳಿಗೆ ಹಾನಿಯಾಗಿಲ್ಲ ಎಂದು ಮಠದ ಮೂಲಗಳಿಂದ ತಿಳಿದುಬಂದಿದೆ.