ಉಡುಪಿ: ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ ವಿಶ್ವ ಕೈ ತೊಳೆಯುವ ದಿನದ ಕುರಿತು ಪೋಸ್ಟರ್ ತಯಾರಿಸುವ ಸ್ಪರ್ಧೆ

ಉಡುಪಿ: ಕೋವಿಡ್ -19 ಸಾಂಕ್ರಾಮಿಕ ರೋಗವು, ಕೈತೊಳೆಯುವಿಕೆಯನ್ನು ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣದಲ್ಲಿ ಅತ್ಯಂತ ಸರಳವಾದ ಹಾಗೂ ಒಂದು ಪ್ರಮುಖ ಕ್ರಮವೆಂದು ಎತ್ತಿ ತೋರಿಸಿದೆ. 15 ನೇ ಅಕ್ಟೋಬರ್ 2021 ರಂದು ಆಚರಿಸಲಾಗುವ ವಿಶ್ವ ಕೈತೊಳೆಯುವ ದಿನಾಚರಣೆಯ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಡಾ.ಟಿಎಂಎ ಪೈ ಆಸ್ಪತ್ರೆಯು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ (8 ರಿಂದ 10 ನೇ ತರಗತಿ) ಪೋಸ್ಟರ್ ತಯಾರಿಕೆ ಸ್ಪರ್ಧೆಯನ್ನು ಆಯೋಜಿಸಿದೆ.

ಪೋಸ್ಟರ್ ಸ್ಪರ್ಧೆಯ ವಿಷಯವು “ನಮ್ಮ ಭವಿಷ್ಯವು ನಮ್ಮ ಕೈಯಲ್ಲಿದೆ – ಒಟ್ಟಿಗೆ ಸಾಗೋಣ”.  ಮೂಲ ಪ್ರತಿಯನ್ನು ಭಾಗವಹಿಸುವವರ ಹೆಸರು, ವಯಸ್ಸು ಮತ್ತು ಸಂಪರ್ಕ ವಿವರಗಳೊಂದಿಗೆ, 12 ಅಕ್ಟೋಬರ್ 2021 ರ ಒಳಗೆ, A3 ಸೈಜ್ ನಲ್ಲಿ [email protected] ಗೆ ಇ-ಮೇಲ್ ಮಾಡಬೇಕು.

ಅತ್ಯುತ್ತಮ 3 ಪೋಸ್ಟರ್‌ಗಳಿಗೆ ನಗದು ಬಹುಮಾನ ನೀಡಲಾಗುವುದು ಮತ್ತು ಭಾಗವಹಿಸುವವರೆಲ್ಲರಿಗೂ ಇ-ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಡಾ. ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.