ಉಡುಪಿ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೂತನ ಅಧ್ಯಕ್ಷರಾಗಿ ಅಂಡಾರು ದೇವಿಪ್ರಸಾದ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.
ಇಂದು ನಡೆದ ಸಂಘದ ಸಭೆಯಲ್ಲಿ ಅಂಡಾರು ದೇವಿಪ್ರಸಾದ್ ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಇತರ ಪದಾಧಿಕಾರಿಗಳು: ಉಪಾಧ್ಯಕ್ಷರಾಗಿ ನಟರಾಜ್ ಪ್ರಭು, ಕಾರ್ಯದರ್ಶಿಯಾಗಿ ಡಾ. ವಿಜಯೇಂದ್ರ ವಸಂತ, ಜೊತೆ ಕಾರ್ಯದರ್ಶಿಗಳಾಗಿ ಲಕ್ಷ್ಮಿಕಾಂತ್ ಬೆಸ್ಕೂರ್, ರಂಜಿತ್ ಪ್ರಭು, ಕೋಶಾಧಿಕಾರಿಯಾಗಿ ಅಮ್ಮುಂಜೆ ಪ್ರಭಾಕರ್ ನಾಯಕ್, ನಿರ್ದೇಶಕರಾಗಿ ಸುಭಾಷ್ ಕಾಮತ್, ಲಯನ್ ಜಯಕರ್ ಶೆಟ್ಟಿ ಇಂದ್ರಾಳಿ , ಮುರಳೀಧರ ಬಾಳಿಗಾ, ಲಯನ್ ವಿ.ಜಿ. ಶೆಟ್ಟಿ, ಚಿತ್ತರಂಜನ್ ಭಟ್, ವಾಲ್ಟರ ಸಲ್ಧಾನ, ಶುಭಾಷಿತ್ ಕುಮಾರ್ ಮತ್ತು ಚಂದ್ರಕಾಂತ್ ಅವರು ಆಯ್ಕೆಯಾಗಿದ್ದಾರೆ.