ಜಿಲ್ಲೆಯಲ್ಲಿ ಕೃಷಿಕರ ಬೆಳಗೆ ಯಾವುದೇ ಹಾನಿಯಾಗದಂತೆ ಕ್ರಮ: ಜಿಲ್ಲಾಧಿಕಾರಿ

ಉಡುಪಿ ಏ.7: ಜಿಲ್ಲೆಯ ಕೊರೋನಾ ನಿಯಂತ್ರಣ ಕುರಿತು ಕೈಗೊಂಡಿರುವ ಕ್ರಮಗಳು ಮತ್ತು ಜಿಲ್ಲೆಯ ಇತರೆ ಸಮಸ್ಯೆಗಳ  ಕುರಿತು ಮಂಗಳವಾರ ಜಿಲ್ಲಾಧಿಕಾರಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ವೀಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಕೃಷಿಕರ ಬೆಳಗೆ ಯಾವುದೇ ಹಾನಿಯಾಗದಂತೆ , ಕಲ್ಲಂಗಡಿ, ಮಟ್ಟುಗುಳ್ಳ, ಅನಾನಸ್  ಸೇರಿದಂತೆ ವಿವಿಧ ಬೆಳಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು  ವ್ಯವಸ್ಥೆ ಮಾಡಲಾಗಿದೆ,  ಕೃಷಿಗೆ ಪೂರಕವಾಗಿ ಕೀಟನಾಶಕ, ಭಿತ್ತನೆ ಬೀಜ ಮತ್ತು ರಸಗೊಬ್ಬರಗಳಿಗೆ ಕೊರತೆಯಾಗದಂತೆ ಕ್ರಮ  ಕೈಗೊಂಡಿದ್ದು, ಜಿಲ್ಲೆಯಲ್ಲಿ ಭತ್ತದ ಕಟಾವು ನಡೆಯುತ್ತಿದೆ, ಎಪಿಎಂಸಿ , ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.