ಕೂಲಿ ಕಾರ್ಮಿಕರನ್ನು ಬಾಡಿಗೆ ಮನೆ, ಶೆಡ್ ಗಳಿಂದ ಹೊರ ಹಾಕಿದರೆ ಕ್ರಿಮಿನಲ್ ಮೊಕದ್ದಮೆ: ಜಿಲ್ಲಾಧಿಕಾರಿ

ಉಡುಪಿ ಮಾ.31: ಕೋರೋನಾ ಸೋಂಕು ಹರಡುವುದನ್ನು ತಡೆಗಟ್ಟಲು, ಜಿಲ್ಲೆಯ ಸಾರ್ವಜನಿಕರು ಮತ್ತು ಕಾರ್ಯ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು ಪ್ರಯಾಣ ಬೆಳಸದಂತೆ ನಿರ್ಭಂಧಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ ಕೂಲಿ ಕಾಮಿಕರು ಬಾಡಿಗೆ ಮನೆ, ಶೆಡ್ ಗಳಲ್ಲಿ ವಾಸವಿದ್ದು, ಇವರನ್ನು ಅಲ್ಲಿಂದ ಹೊರ ಹಾಕುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ.

ಯಾವುದೇ ಕಾರಣಕ್ಕೂ ಇವರನ್ನು  ಬಾಡಿಗೆ ಶೆಡ್?ಮನೆಗಳ ಮಾಲೀಖರು ಹೊರ ಹಾಕುವಂತಿಲ್ಲ ಹಾಗೂ ಮನೆ/ಶೆಡ್ ಖಾಲಿ ಮಾಡುವಂತೆ ಒತ್ತಾಯಿಸುವಂತಿಲ್ಲ ಈ ಬಗ್ಗೆ ದೂರು ಬಂದಲ್ಲಿ ಸಂಬಂದಪಟ್ಟವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಅಲ್ಲದೇ ಜಿಲ್ಲೆಯಲ್ಲಿ ಕಾಮಿಕರ ಶೆಡ್ /ಬಾಡಿಗೆ ಮನೆಗಳಲ್ಲಿ ವಾಸವಿರುವ ಬಾಡಿಗೆದಾರರಿಂದ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಬಾಡಿಗೆಯನ್ನು ವಸೂಲಿ ಮಾಡದಂತೆ ಎಚ್ಚರಿಸಿ, ಒಂದು ವೇಳೆ ವಸೂಲಿ ಮಾಡಿದಲ್ಲಿ ಸಂಬಂದಪಟ್ಟ ಮನೆ ಮಾಲೀಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿನ ಕಾರ್ಖಾನೆಗಳಲ್ಲಿ ಮತ್ತು ಕಟ್ಟಡಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೂಲಿ ಕಾರ್ಮಿಕರಿಗೆ ನಿರ್ಭಂಧದ ಅವಧಿಯಲ್ಲಿ ಊಟೋಪಚಾರಗಳಿಗೆ ತೊಂದರೆ ಆಗುತ್ತಿರುವುದು ಜಿಲ್ಲಾಡಳಿತದ ಗಮನಕ್ಕ ಬಂದಿದ್ದು, ಅಂತಹ ಕೂಲಿ ಕಾರ್ಮಿಕರಿಗೆ ದಿನನಿತ್ಯಕ್ಕೆ ಅಗತ್ಯವಿರುವ ಊಟೋಪಚಾರ ಅಥವಾ ಅದಕ್ಕೆ ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು , ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುವ ಕಾರ್ಖಾನೆ ಮತ್ತು ಕಟ್ಟಡ ನಿರ್ಮಾಣ ಮಾಡುತ್ತಿರುವ ಮಾಲೀಕರು ಒದಗಿಸುವಂತೆ ಸೂಚನೆ ನೀಡಿದ್ದು, ಈ ಕುರಿತು ದೂರು ಸ್ವೀಕೃತವಾದಲ್ಲಿ ಸಂಬಂದಪಟ್ಟ ಮಾಲೀಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

ದೂರುಗಳನ್ನು ನೀಡುವವರು ತಮ್ಮ ದೂರುಗಳನ್ನು, ರಾಜ್ ಜಿ ನಾಯ್ಕ್ , ಹಿರಿಯ ಬೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಉಡುಪಿ ಮೊ.ಸಂ. 9480092738, ಬಾಲಕೃಷ್ಣ, ಜಿಲ್ಲಾ ಕಾರ್ಮಿಕ ಅಧಿಕಾರಿ ಮೊ.ಸಂ. 9448334324, ಪ್ರವೀಣ್ ಕುಮಾರ್, ಕಾರ್ಮಿಕ ನಿರೀಕ್ಷಕರು ಮೊ.ಸಂ. 8792638806 ರವರಿಗೆ ಸಲ್ಲಿಸಬಹುದಾಗಿದೆ.