Home Trending ಕೊರೊನ ಹಿನ್ನೆಲೆ: ಉಡುಪಿ ಜಿಲ್ಲೆಯಿಂದ ಇಂದು 53 ಮಂದಿಯ ಮಾದರಿ ಪರೀಕ್ಷೆಗೆ ರವಾನೆ

ಕೊರೊನ ಹಿನ್ನೆಲೆ: ಉಡುಪಿ ಜಿಲ್ಲೆಯಿಂದ ಇಂದು 53 ಮಂದಿಯ ಮಾದರಿ ಪರೀಕ್ಷೆಗೆ ರವಾನೆ

ಉಡುಪಿ: ಜಿಲ್ಲೆಯಲ್ಲಿ ಹೊಸದಾಗಿ 53 ಮಂದಿ ಕೊರೊನಾ ಶಂಕಿತರನ್ನು ಪತ್ತೆ ಮಾಡಲಾಗಿದ್ದು, ಇಂದು ಅವರ ಗಂಟಲಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ತಿಳಿಸಿದ್ದಾರೆ.
53 ಮಂದಿಯ ಪೈಕಿ 51 ಮಂದಿ ಸೋಂಕಿತರ ಸಂಪರ್ಕದಲ್ಲಿದ್ದವರಾಗಿದ್ದು, ಇಬ್ಬರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದವರಾಗಿದ್ದಾರೆ. ಎಲ್ಲರನ್ನು ನಗರದ ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು 41 ಮಂದಿಯ ವೈದ್ಯಕೀಯ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಬಂದಿದೆ. ಇನ್ನು‌ 56 ಮಂದಿಯ ವರದಿ ಬರಲು ಬಾಕಿ ಇದೆ ಎಂದು ಮಾಹಿತಿ ನೀಡಿದ್ದಾರೆ.
error: Content is protected !!