ಬಂಟ್ವಾಳ: ಲಾಕ್ ಡೌನ್ ಮುಂದುವರಿಕೆ ಹಿನ್ನೆಲೆ ಬ್ಯಾಂಕ್ ಮುಂದೆ ಜನಜಂಗುಳಿ

ಮಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಆದೇಶ ಮುಂದುವರೆಯುವ ಹಿನ್ನೆಲೆ ಸಾರ್ವಜನಿಕರು ಹಣಕ್ಕಾಗಿ ಬಾಂಕ್ ಮುಂದೆ ಪರದಾಟ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ಏಪ್ರಿಲ್ 14ರ ವರೆಗೆ ಇದ್ದ ಲಾಕ್‌ಡೌನ್ ಏಪ್ರಿಲ್ 30ರ‌ ವರೆಗೂ ಮುಂದುವರಿಯಲಿದೆ. ಹೀಗಾಗಿ ಜನಧನ್ ಅಕೌಂಟ್ ಜಮೆಯಾದ ಆದ ಹಣವನ್ನು ವಿತ್ ಡ್ರಾ ಮಾಡಲು ಬಂಟ್ವಾಳದ ಸಿಂಡಿಕೇಟ್ ಬ್ಯಾಂಕ್ ಮುಂದೆ ನೂರಾರು ಜನ ಜಮಾವಣೆಗೊಂಡಿದ್ದರು. ಇಂದು ಬೆಳಗ್ಗಿನಿಂದಲೂ ಸುಮಾರು 300ಕ್ಕೂ ಹೆಚ್ಚು ಜನರು ಗುಂಪಾಗಿ ಸೇರಿದ್ದು, ಲಾಕ್ ಡೌನ್ ಇದ್ದರೂ […]

ಚೆಂಬುಗುಡ್ಡೆ ಮಸೀದಿ ಆವರಣದಲ್ಲಿ ಆರೋಗ್ಯ ತಪಾಸಣೆಗೆ ಒಳಪಡುವಂತೆ ಮಾಜಿ ಸಚಿವ ಯು.ಟಿ ಖಾದರ್ ಮನವಿ

ಮಂಗಳೂರು: ವಾರದ ಹಿಂದೆ ಮಂಗಳೂರಿನ ಹೊರ ವಲಯದ ತೊಕ್ಕೊಟ್ಟು ಮೂಲದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸ್ಥಳೀಯ ನಾಗರಿಕರು ಇಲ್ಲಿನ ಚೆಂಬುಗುಡ್ಡೆ ಮಸೀದಿ ಆವರಣದಲ್ಲಿ ಆರೋಗ್ಯ ತಪಾಸಣೆಗೆ ಒಳಪಡುವಂತೆ ಮಾಜಿ ಸಚಿವ ಯು.ಟಿ ಖಾದರ್ ಮಸೀದಿ ಮೈಕ್ ನಲ್ಲಿ ಇಂದು ಮನವಿ ಮಾಡಿದರು. ಸೋಂಕು ದೃಡಪಟ್ಟ ತೊಕ್ಕೊಟ್ಟು ಮೂಲದ‌ ವ್ಯಕ್ತಿ ವ್ಯಕ್ತಿ ಇಲ್ಲಿನ ಚೆಂಬುಗುಡ್ಡೆ ಮಸೀದಿಗೆ ಹಲವು ಬಾರಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತಂಡ ಮಸೀದಿ ಆವರಣದಲ್ಲಿ ಆರೋಗ್ಯ ತಪಾಸಣೆಗೆ […]

ಮಂಗಳೂರು: ನಾಡದೋಣಿ ಮಿನುಗಾರಿಕೆ – ನಿಗದಿತ ಸ್ಥಳಗಳಲ್ಲಿ ಮಾರಾಟ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ನಾಡದೋಣಿ ಮೀನುಗಾರಿಕೆ ಆರಂಭವಾಗಿರುವ ಹಿನ್ನೆಲೆಯಲ್ಲಿ ‌ಕರೋನಾ ಮುನ್ನಚ್ಚರಿಕಾ ಕ್ರಮಗಳನ್ನು ಪಾಲಿಸುವ ಕುರಿತು ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೀನುಗಾರರ ಮುಖಂಡರೊಂದಿಗೆ ಸಭೆ ನಡೆಯಿತು. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮಾತನಾಡಿ, ನಾಡದೋಣಿ ಮೀನುಗಾರರು ಸರಕಾರದ ಎಲ್ಲ ಸೂಚನೆಗಳನ್ನು ಪಾಲಿಸಬೇಕು. ಮೀನು ಖರೀದಿ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು. ಕರಾವಳಿ ರಕ್ಷಣಾ ಪೊಲೀಸರು ಈ ಬಗ್ಗೆ ನಿಗಾ ವಹಿಸಲು ಅವರು ಸೂಚಿಸಿದರು. ಮೀನುಗಾರರು ಮೀನು ಹಿಡಿದು ತಂದು ಚಿಲ್ಲರೆಯಾಗಿ ಮಾರಾಟ ಮಾಡುವಂತಿಲ್ಲ. ನಿಗದಿತ ಸ್ಥಳಕ್ಕೆ ದೋಣಿ […]

ಗೇರು ಬೀಜ ಮಾರಾಟಕ್ಕೆ ನಿರ್ಬಂಧವಿಲ್ಲ: ಸಚಿವ ಕೋಟ ಸ್ಪಷ್ಟನೆ

ಮಂಗಳೂರು: ಗಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವ್ಯಾಪ್ತಿಯಲ್ಲಿ ಬರುವ ಗೇರು ಕೃಷಿಕರು, ತಮ್ಮ ಗೇರು ಬೆಳೆಯನ್ನು ಕಟಾವು ಮಾಡುವುದೂ ಸೇರಿದಂತೆ, ಸಾಗಾಟ ಮತ್ತು ಮಾರಟ ಮಾಡಲು ಯಾವುದೇ ನಿರ್ಬಂಧವಿರುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ. ಮಧ್ಯವರ್ತಿಗಳು ತಮ್ಮ ಗೇರು ಬೀಜವನ್ನು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ ಎಂಬ ಗೇರು ಕೃಷಿಕರ ದೂರಿನ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ ಎಂದು ಕೋಟ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು: ಕೊರೊನ ಸೋಂಕಿತ ಮತ್ತೋರ್ವ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಮಂಗಳೂರು: ಮಂಗಳೂರಿನಲ್ಲಿ ಓರ್ವ ಕೊರೊನಾ ಪೀಡಿತ ಗುಣಮುಖರಾಗಿದ್ದು, ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದಕ್ಷಿಣ ಕನ್ನಡ ‌ಜಿಲ್ಲೆಯ ಸುಳ್ಯ ಮೂಲದ 34 ವರ್ಷದ ಯುವಕ ಡಿಸ್ಚಾರ್ಜ್ ಆಗಿದ್ದಾರೆ. ದುಬೈಯಿಂದ‌ ಮಾರ್ಚ್ 18 ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅನಂತರ ಸುಳ್ಯದ ತನ್ನ ಮನೆಗೆ ತೆರಳಿದ್ದರು. ಮಾರ್ಚ್ 28 ರಂದು ಅನಾರೋಗ್ಯದಿಂದ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಮಾರ್ಚ್‌ 31ರಂದು ಗಂಟಲಿನ ದ್ರವ ಪರೀಕ್ಷೆಯಲ್ಲಿ ಕೊರೊನಾ ಸೋಂಕು ದೃಡಪಟ್ಟಿತ್ತು. ಎಪ್ರಿಲ್ 11 ಹಾಗೂ 12 ರಂದು ಗಂಟಲಿನ […]