ಉಡುಪಿ: ಖಾಸಗಿ ಸಿಟಿ ಬಸ್ ಚಾಲಕನೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಮಧ್ವನಗರದಲ್ಲಿ ಗುರುವಾರ ನಡೆದಿದೆ.
ಮೃತರನ್ನು ಕೊಡವೂರು ಗ್ರಾಮದ ಮಧ್ವನಗರದ ನಿವಾಸಿ ಅಶೋಕ್ ಕುಮಾರ್ (57) ಎಂದು ಗುರುತಿಸಲಾಗಿದೆ.
ಇವರು ಖಾಸಗಿ ಸಿಟಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದು, ಇದೇ ಖಿನ್ನತೆಯಲ್ಲಿ ಮನನೊಂದು ಆದಿ ಉಡುಪಿಯ ಅಂಬೇಡ್ಕರ್ ಭವನದ ಬಳಿ ಇರುವ ಸರ್ಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.