ಉಡುಪಿ: ಬೃಹತ್ ಗಾತ್ರದ ಹೆಬ್ಬಾವು ಪತ್ತೆ

ಉಡುಪಿ: ಇಲ್ಲಿನ ಪಿಪಿಸಿ ಕಾಲೇಜಿನ ಸಮೀಪ ವಕೀಲ ಲಕ್ಷ್ಮಣ ಶೆಣೈ ಅವರ ಮನೆ ಬಳಿಯ ನಿರ್ಜನ ಪ್ರದೇಶದಲ್ಲಿ ಎರಡು ಬೃಹತ್ ಗಾತ್ರದ ಹೆಬ್ಬಾವುಗಳು ಪತ್ತೆಯಾಗಿವೆ.

ವಕೀಲ ಲಕ್ಷ್ಮಣ ಶೆಣೈ, ಗಣೇಶ ಆಚಾರ್ಯ, ಸುಧೀರ್ ನಾಯಕ್, ಆಟೊ ಚಾಲಕ ರಾಜಕುಮಾರ್ ಅವರು ಕಾರ್ಯಾಚರಣೆ ನಡೆಸಿ ಒಂದು ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಅದನ್ನು ಸುರಕ್ಷಿತವಾಗಿ ದೂರದ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.