ಉಡುಪಿ: ಉಡುಪಿಯ ಖ್ಯಾತ ಭಟ್ ಕ್ಯಾಟರ್ಸನ ಮಾಲೀಕ, ಗುಂಡಿಬೈಲು ದಿ. ಪುಂಡಲಿಕ್ ಭಟ್ ಅವರ ಮಗ ಎಚ್. ಸುಧೀರ್ ಭಟ್ (46) ಹೃದಯಾಘಾತದಿಂದ ಇಂದು ನಿಧನ ಹೊಂದಿದರು.
ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯರು ಮತ್ತು ಕಡಿಯಾಳಿ ಭಾರತೀಯ ಜನತಾ ಪಾರ್ಟಿಯ ಪ್ರಮುಖ ಸದಸ್ಯರಾಗಿದ್ದ ಇವರು, ಪ್ರಥಮ ಕೊವಿಡ್ ಸಂದರ್ಭದಲ್ಲಿ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಅನ್ನದಾನ ಸೇವೆಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದ್ದರು.
ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಸಹೋದರನನ್ನು ಆಗಲಿದ್ದಾರೆ.
ಉಡುಪಿ ಶಾಸಕ ಕೆ. ರಘುಪತಿ ಭಟ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ ರಾಘವೇಂದ್ರ ಕಿಣಿ ಮೊದಲಾದವರು ಪಾರ್ಥಿವ ಶರೀರದ ದರ್ಶನ ಮಾಡಿದರು. ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ, ಅಯ್ಯಪ್ಪ ಭಕ್ತವೃಂದ ಉಡುಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.