ಉಡುಪಿ: ಮೂಳೆ ಸಾಂದ್ರತೆ ತಪಾಸಣಾ ಕಾರ್ಯಕ್ರಮ

ಉಡುಪಿ: ಜಯಂಟ್ಸ್ ಗ್ರೂಪ್ ಆಫ್ ಉಡುಪಿ ಮತ್ತು ಹಿರಿಯ ನಾಗರೀಕರ ಸಂಸ್ಥೆ ಉಡುಪಿ ವತಿಯಿಂದ ಅಜ್ಜರಕಾಡಿನ ಹಿರಿಯ ನಾಗರಿಕರ ಕಛೇರಿಯಲ್ಲಿ ಮೂಳೆ ಸಾಂದ್ರತಾ ತಪಸಣಾ ಕಾರ್ಯಕ್ರಮ ನಡೆಯಿತು.
ಜಯಂಟ್ಸ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ್ ಅಮೀನ್ ಮತ್ತು ಹಿರಿಯ ನಾಗರಿಕ ವೇದಿಕೆಯ ಉಪಾಧ್ಯಕ್ಷ ವಿಶ್ವನಾಥ ಹೆಗ್ಡೆ ಮೂಲಕ  ಉದ್ಘಾಟಿಸಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಜಯಂಟ್ಸ್ ಯುನಿಟ್ ಡೈರೆಕ್ಟರ್ ರಮೇಶ್ ಪೂಜಾರಿ, ಜಯಂಟ್ಸ್ ಉಡುಪಿ ಅಧ್ಯಕ್ಷ  ಲಕ್ಷ್ಮೀಕಾಂತ್ ಬೆಸ್ಕೂರ್, ಉಪಾಧ್ಯಕ್ಷ ಇಕ್ಬಾಲ್ ಮನ್ನಾ, ಪೂರ್ವಾಧ್ಯಕ್ಷರುಗಳಾದ ಉಷಾ ರಮೇಶ್, ರಾಜೇಶ್ ಶೆಟ್ಟಿ, ದೇವದಾಸ್ ಕಾಮತ್, ರೇಖಾ ಪೈ , ‌ವಿನ್ಸೆಂಟ್ ಸಲ್ಡಾನ ಮತ್ತು ಜಯಂಟ್ಸ್ ಸದಸ್ಯರು, ಹಿರಿಯ ನಾಗರಿಕ ಸಂಸ್ಥೆ‌ಯ ಉಪಾಧ್ಯಕ್ಷ ಸದಾನಂದ ಹೆಗ್ಡೆ ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಡುಪಿಯ ನೂರಾರು ನಾಗರಿಕರು ಕಾರ್ಯಕ್ರಮದ ಪ್ರಯೋಜನ ಪಡೆದರು.