ಉಡುಪಿ: ಬನ್ನಂಜೆ ಬಾಬು ಅಮೀನ್ ಪ್ರಶಸ್ತಿ ಪ್ರದಾನ

ಉಡುಪಿ: ಯುವವಾಹಿನಿ ಉಡುಪಿ ಘಟಕದ ವತಿಯಿಂದ ಕೊಡಮಾಡಲ್ಪಡುವ ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಜಾನಪದ ವಿದ್ವಾಂಸ, ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಅರುಣ್ ಕುಮಾರ್ ಎಸ್ ಆರ್ ಅವರಿಗೆ ಹಾಗೂ ಕಾರ್ಕಳ ಮುಜೂರು ಹಿರ್ಗಾನ ಹಾಡಿ ಗರೋಡಿಯ ಪಾತ್ರಿ ಲೋಕು ಪೂಜಾರಿ ಅವರಿಗೆ ಬನ್ನಂಜೆ ಬಾಬು ಅಮೀನ್ ಜಾನಪದ ಕಲಾವಿದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಚಿಟ್ಪಾಡಿ ಬೀಡಿನಗುಡ್ಡೆ ಸಮೀಪದ ಶ್ರೀ ಲಕ್ಷ್ಮಿ ಸಭಾ ಭವನದಲ್ಲಿ ಘಟಕದ ಅಧ್ಯಕ್ಷ ಜಗದೀಶ್ ಕುಮಾರ್ ಸಭಾಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಆದಾಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ವಿಶ್ವನಾಥ ಬಂಗೇರ, ತೆಂಕನಿಡಿಯೂರು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ದುಗ್ಗಪ್ಪ ಕಜೆಕಾರು, ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಡಾ. ರಾಜಾರಾಮ್‌, ಉಡುಪಿ ಘಟಕದ ಸಲಹೆಗಾರ ಸಂತೋಷ್ ಕುಮಾರ್‌, ಮಾಜಿ ಅಧ್ಯಕ್ಷ ರಘುನಾಥ ಮಾಬಿಯಾನ್, ಮಹಿಳಾ ಸಂಚಾಲಕಿ ನವೀಶ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕ ಭಾಸ್ಕರ ಸುವರ್ಣ ಕನ್ನರ್ಪಾಡಿ ಸ್ವಾಗತಿಸಿದರು. ಮಂಗಳೂರು ವಿ ವಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಅಧ್ಯಕ್ಷರು ಆಗಿರುವ
ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಮುದ್ದು ಮೂಡುಬೆಳ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಮಿತಾಂಜಲಿ ಕಿರಣ್ ಹಾಗೂ ಮಾಜಿ ಅಧ್ಯಕ್ಷ ಅಶೋಕ್ ಕೋಟ್ಯಾನ್ ಪ್ರಶಸ್ತಿ ಪುರಸ್ಕ್ರತರನ್ನು ಪರಿಚಯಿಸಿದರು.

ಈ ಸಂದರ್ಭದಲ್ಲಿ ಉರಗ ತಜ್ಞ ಗುರುರಾಜ್ ಸನಿಲ್ ಯುವವಾಹಿನಿಯ ಗ್ರಂಥಾಲಯ ಜ್ಞಾನವಾಹಿನಿಗೆ ಪುಸ್ತಕಗಳನ್ನು ನೀಡಿದರು.
ಕಾರ್ಯದರ್ಶಿ ಮಾಲತಿ ಅಮೀನ್ ವಂದಿಸಿದರು. ದಯಾನಂದ ಕರ್ಕೇರ ನಿರೂಪಿಸಿದರು.